ಏಳು ಅಧ್ಯಾಯಗಳಲ್ಲಿ ‘ಮಹಾವತಾರ್..’ ಸರಣಿ
ಕ್ಲೀಮ್ ಪ್ರೊಡಕ್ಷನ್ಸ್ ನಿರ್ಮಿಸಿ ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿರುವ ‘ಮಹಾವತಾರ್ ನರಸಿಂಹ’ ಸಿನಿಮಾ ಜುಲೈ 25ರಂದು ಬಿಡುಗಡೆಯಾಗಲಿದೆ.
‘ಮಹಾವತಾರ್ ನರಸಿಂಹ’ ಸಿನಿಮಾವು ವಿಷ್ಣುವಿನ ದಶಾವತಾರಗಳ ಆಧಾರದ ಮೇಲೆ ಮುಂದಿನ ದಶಕದವರೆಗೆ ಸಾಗಲಿರುವ ಬೃಹತ್ ಆನಿಮೇಟೆಡ್ ಸರಣಿಯ ಮೊದಲ ಅಧ್ಯಾಯವಾಗಿದೆ. ಅಶ್ವಿಕ್ ಕುಮಾರ್ ಈ ಅಧ್ಯಾಯದ ನಿರ್ದೇಶಕರಾಗಿದ್ದಾರೆ.
‘ಈ ಕಥೆಯು ಪ್ರಹ್ಲಾದನ ನಂಬಿಕೆಗೆ ವಿರುದ್ಧವಾಗಿ ನಿಲ್ಲುವ ತಂದೆ ಹಿರಣ್ಯಕಶಿಪುವನ್ನು ಮತ್ತು ಅವನ ಅಹಂಕಾರವನ್ನು ನಾಶಮಾಡಲು ಭೂಮಿಗೆ ಇಳಿದ ದೈವಿಕ ಅವತಾರ ನರಸಿಂಹನ ಉದಯವನ್ನು ಪೌರಾಣಿಕ ಹಿನ್ನೆಲೆಯಲ್ಲಿ, ಗಟ್ಟಿ ತಾಂತ್ರಿಕ ನೆಲೆಗಟ್ಟಿನಲ್ಲಿ ಸಿನಿಮಾ ಮೂಲಕ ಹೇಳಲಾಗುತ್ತಿದೆ’ ಎಂದಿದೆ ತಂಡ.
‘ಮಹಾವತಾರ್’ ಯೂನಿವರ್ಸ್‌ನ ಈ ಮೊದಲ ಅಧ್ಯಾಯವನ್ನು ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ನಿರ್ಮಾಣ ಮಾಡಿದ್ದಾರೆ. ಈ ಸರಣಿಯಲ್ಲಿ ಮುಂದಿನ ಸಿನಿಮಾಗಳು ಹೀಗಿವೆ, ‘ಮಹಾವತಾರ್ ಪರಶುರಾಮ’(2027), ‘ಮಹಾವತಾರ್ ರಘುನಂದನ’(2029), ‘ಮಹಾವತಾರ್ ಧ್ವಾರಕಾಧೀಶ್’(2031), ‘ಮಹಾವತಾರ್ ಗೋಕುಲನಂದ’(2033), ‘ಮಹಾವತಾರ್ ಕಲ್ಕಿ ಭಾಗ 1’(2035), ‘ಮಹಾವತಾರ್ ಕಲ್ಕಿ ಭಾಗ 2’(2037) ಮೂಡಿಬರಲಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಒಟ್ಟು ಐದು ಭಾಷೆಗಳಲ್ಲಿ 3ಡಿಯಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.