ADVERTISEMENT

ಗ್ರಾಹಕರ ನ್ಯಾಯಾಲಯದಿಂದ ತೆಲುಗು ನಟ ಮಹೇಶ್ ಬಾಬುಗೆ ನೋಟಿಸ್

ಪಿಟಿಐ
Published 7 ಜುಲೈ 2025, 15:17 IST
Last Updated 7 ಜುಲೈ 2025, 15:17 IST
ಮಹೇಶ್ ಬಾಬು
ಮಹೇಶ್ ಬಾಬು   

ಹೈದರಾಬಾದ್: ರಿಯಲ್ ಎಸ್ಟೇಟ್ ಕಂಪನಿ ಸಾಯಿ ಸೂರ್ಯ ಡೆವಲಪರ್ಸ್‌ನ ಬ್ರಾಂಡ್ ಅಂಬಾಸಿಡರ್ ಆಗಿರುವ ತೆಲುಗು ನಟ ಮಹೇಶ್ ಬಾಬು ಅವರಿಗೆ ಕಂಪನಿ ವಿರುದ್ಧದ ವಂಚನೆ ಪ್ರಕರಣವೊಂದರಲ್ಲಿ ರಂಗಾರೆಡ್ಡಿ ಜಿಲ್ಲಾ ಗ್ರಾಹಕ ಆಯೋಗವು ನೋಟಿಸ್ ಜಾರಿ ಮಾಡಿದ್ದು, ಅವರನ್ನು ಮೂರನೇ ಪ್ರತಿವಾದಿಯನ್ನಾಗಿ ಹೆಸರಿಸಿದೆ.

ಪ್ರಕರಣದ ಮೂವರು ಪ್ರತಿವಾದಿಗಳಿಗೂ ಲೀಗಲ್ ನೋಟಿಸ್ ನೀಡಲಾಗಿದೆ.

ರಿಯಲ್ ಎಸ್ಟೇಟ್ ಕಂಪನಿಯ ಭರವಸೆಗಳನ್ನು ನಂಬಿ ವೈದ್ಯೆ ಮತ್ತು ಇನ್ನೊಬ್ಬ ವ್ಯಕ್ತಿ ಬಾಲಾಪುರದಲ್ಲಿ ಪ್ಲಾಟ್‌ಗಳನ್ನು ಖರೀದಿಸಲು ₹34.80 ಲಕ್ಷ ಪಾವತಿಸಿದ್ದಾರೆ. ಪ್ರಚಾರದ ಪೋಸ್ಟರ್‌ನಲ್ಲಿ ಮಹೇಶ್ ಬಾಬು ಅವರ ಛಾಯಾಚಿತ್ರ ಕಂಡು ಆಕರ್ಷಿತರಾಗಿ ಪ್ಲಾಟ್ ಖರೀದಿಸಲು ಹಣ ಪಾವತಿಸಿದ್ದೆವು ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ಲಾಟ್ ನೀಡಲು ಕಂಪನಿ ವಿಫಲವಾದ ಹಿನ್ನೆಲೆ ಖರೀದಿದಾರರು ಮರುಪಾವತಿಗೆ ಒತ್ತಾಯಿಸಿದ್ದಾರೆ. ಎರಡನೇ ಪ್ರತಿವಾದಿಯು ಆರ್ಥಿಕ ತೊಂದರೆಯನ್ನು ಉಲ್ಲೇಖಿಸಿ ಕಂತುಗಳಲ್ಲಿ ಕೇವಲ ₹15 ಲಕ್ಷ ಹಿಂದಿರುಗಿಸಿದ್ದಾರೆ. ಉಳಿದ ಹಣ ನೀಡದೇ ಇದ್ದ ಕಾರಣ ಖರೀದಿದಾರರು ಗ್ರಹಕರ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಇದೇ ಏಪ್ರಿಲ್ ತಿಂಗಳಲ್ಲಿ ಸಾಯಿ ಸೂರ್ಯ ಡೆವಲಪರ್ಸ್ ಮತ್ತು ಸುರಾನ ಗ್ರೂಪ್ ಒಳಗೊಂಡ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ)ಮಹೇಶ್ ಬಾಬು ಅವರನ್ನು ತನಿಖೆಗೆ ಒಳಪಡಿಸಿತ್ತು.

ಮಹೇಶ್ ಬಾಬು ಪ್ರಸ್ತುತ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ಮುಂಬರುವ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.