ADVERTISEMENT

‘ರೆಡ್’ನಲ್ಲಿ ಮಾಳವಿಕಾ

ಟಾಲಿವುಡ್‌ನಲ್ಲಿ ಮುಂಬೈ ಬೆಡಗಿ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 8:09 IST
Last Updated 23 ನವೆಂಬರ್ 2020, 8:09 IST
ಮಾಳವಿಕಾ ಶರ್ಮಾ
ಮಾಳವಿಕಾ ಶರ್ಮಾ   

ಮುಂಬೈ ಬೆಡಗಿ ಮಾಳವಿಕಾ ಶರ್ಮಾ ತೆಲುಗಿನ ಆಕ್ಷನ್‌ ಥ್ರಿಲ್ಲರ್‌ ʼರೆಡ್‌ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ

ಇದು ತೆಲುಗಿನ ತಾಡಂ ಚಿತ್ರದ ರಿಮೇಕ್‌. ತೆಲುಗಿನಲ್ಲಿರಾಮ್ ಪೋತಿನೇನಿ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. 2018ರಲ್ಲಿ ಮಾಳವಿಕಾ ಅವರು ರವಿತೇಜ ಜತೆಗೆ ‘ನೆಲ ಟಿಕೆಟ್‌’ ಚಿತ್ರದಲ್ಲಿ ನಟಿಸಿದ್ದರು. ಹಾಗಾಗಿ ಮಾಳವಿಕಾ ತೆಲುಗು ಸಿನಿಪ್ರಿಯರಿಗೆ ಪರಿಚಿತ ಮುಖ.

ಅಂದಹಾಗೆ ಮಾಳವಿಕಾರ ‘ಕ್ಲೆಪ್ಟೋಮೇನಿಯಾ’ ಎನ್ನುವ ಸಮಸ್ಯೆ ಇತ್ತಂತೆ. ದೀರ್ಘಕಾಲದಿಂದ ಈ ಸಮಸ್ಯೆಯಿಂದ ತಾನು ಬಳಲುತ್ತಿದ್ದೆ ಎಂದು ಮಾಳವಿಕಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ADVERTISEMENT

‘ಕ್ಲೆಪ್ಟೋಮೇನಿಯಾ’ ಎಂದೆ ಬೇರೆಯವರ ವಸ್ತುಗಳನ್ನು ವಿನಾಕಾರಣ ಕದಿಯುವುದು. ಯಾವುದೇ ವೈಯಕ್ತಿಕ ಅಥವಾ ಆರ್ಥಿಕ ಲಾಭದ ಉದ್ದೇಶ ಇಲ್ಲದೆ ಸುಮ್ಮನೆ ಕದಿಯುವ ಮನೋ ಸಮಸ್ಯೆ ಇದು. ‘ಆದರೆ ತಾನು ಎಲ್ಲೂ ಸಿಕ್ಕಿಬೀಳಲಿಲ್ಲ’ ಎಂದು ಹೇಳುತ್ತಾರೆ ಮಾಳವಿಕಾ.

ಈವರ್ಷದಮಾರ್ಚ್‌ನಲ್ಲಿ ಮಾಳವಿಕಾ ಅವರು ಹೈದರಾಬಾದ್‌ನ ಕ್ರಿಮಿನಲ್‌ ವಕೀಲ ವಿ.ಪಟ್ಟಾಭಿ ಅವರ ಬಳಿ ಇಂಟರ್ನಿಯಾಗಿ ಸೇರಿಕೊಂಡಿದ್ದರು. ಆಗ ಅವರು ಕೋರ್ಟ್‌ ಆವರಣದಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಮತ್ತೇಕೆ ಸಿನಿಮಾಕ್ಕೆ ಬಂದಿರಿ ಎಂಬ ಪ್ರಶ್ನೆಗೆ, ‘ಸಿನಿಮಾ ನನ್ನ ಪ್ಯಾಷನ್‌. ಇದು ನನ್ನ ಜೀವನದ ಭಾಗ. ನನ್ನ ವೃತ್ತಿ ಬದುಕಿಗೆ ಆಕಾರ ನೀಡಿದ ಹೈದರಾಬಾದ್‌ಗೆ ನನ್ನ ಹೃದಯದಲ್ಲಿ ವಿಶೇಷ ಜಾಗವಿದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.