ADVERTISEMENT

ಮತ್ತೆ ತೆರೆಗೆ ನಸ್ರಿಯಾ

​ಪ್ರಜಾವಾಣಿ ವಾರ್ತೆ
Published 28 ಜುಲೈ 2019, 19:45 IST
Last Updated 28 ಜುಲೈ 2019, 19:45 IST
ಪತಿ ಫಹದ್‌ ಜೊತೆ ನಸ್ರಿಯಾ
ಪತಿ ಫಹದ್‌ ಜೊತೆ ನಸ್ರಿಯಾ   

ಎರಡು ವರ್ಷಗಳ ವಿರಾಮದ ನಂತರ ಮಲಯಾಳಂ ನಟಿ, ‘ಬೆಂಗಳೂರು ಡೇಸ್‌’ ಖ್ಯಾತಿಯ ನಸ್ರಿಯಾ ನಜೀಂ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಪತಿ, ನಟ ಫಹಾದ್‌ ಫಾಜಿಲ್‌ ನಾಯಕನಾಗಿರುವ ‘ಟ್ರಾನ್ಸ್‌’ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ ಅಂತಿಮ ಹಂತದಲ್ಲಿದೆ.

ಈ ಚಿತ್ರದಲ್ಲಿ ಶೋಭಿನ್‌ ಶಹೀರ್‌, ಗೌತಮ್‌ ಮೆನನ್‌, ಚೆಂಬನ್‌ ವಿನೋದ್‌, ವಿನಾಯಕನ್‌, ಶ್ರೀನಾಥ್‌ ಭಾಸಿ ಅವರು ಈ ಚಿತ್ರದಲ್ಲಿದ್ದಾರೆ. ಈ ಚಿತ್ರವನ್ನು ಅನ್ವರ್‌ ರಶೀದ್‌ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕ ಅಮಲ್‌ ನೀರಾದ್‌ ಅವರು ಸಿನಿಮಾಟೋಗ್ರಾಫರ್‌ ಆಗಿ ಬದಲಾಗಿದ್ದಾರೆ. ವಿನ್ಸೆಂಟ್‌ ಅವರ ಚಿತ್ರಕತೆ ಇದಕ್ಕಿದೆ. ಈ ಚಿತ್ರ ಡಿಸೆಂಬರ್‌ ತಿಂಗಳಲ್ಲಿ ತೆರೆ ಕಾಣುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT