ADVERTISEMENT

ಶೈಲಾಕ್‌ ಭರ್ಜರಿ ಓಪನಿಂಗ್‌

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 19:45 IST
Last Updated 27 ಜನವರಿ 2020, 19:45 IST
ಶೈಲಾಕ್‌ ಚಿತ್ರದ ದೃಶ್ಯ
ಶೈಲಾಕ್‌ ಚಿತ್ರದ ದೃಶ್ಯ   

ಮಲಯಾಳ ಚಿತ್ರರಂಗದ ಸೂಪರ್‌ ಸ್ಟಾರ್‌ ಮಮ್ಮುಟ್ಟಿ ಅಭಿನಯದ ‘ಶೈಲಾಕ್‌‘ ಕೇರಳದಲ್ಲಿ ಭರ್ಜರಿ ಓಪನಿಂಗ್‌ ಕಂಡಿದೆ. ಜನವರಿ 23ರಂದು ವಿಶ್ವದಾದ್ಯಂತ ಬಿಡುಗಡೆಯಾದ ಆ್ಯಕ್ಷನ್‌ ಕಾಮಿಡಿ ಚಿತ್ರ ಮೊದಲ ದಿನವೇ ₹5 ಕೋಟಿ ಬಾಚಿಕೊಂಡಿದೆ. ಒಟ್ಟಾರೆ ನಾಲ್ಕು ದಿನದಲ್ಲಿ ಚಿತ್ರದ ಗಳಿಕೆ ₹20 ಕೋಟಿ ಗಡಿ ತಲುಪಿದೆ.

ಚಿತ್ರ ಅಜಯ್‌ ವಾಸುದೇವ ಆ್ಯಕ್ಷನ್‌ ಕಟ್‌ ಹೇಳಿರುವ ಚಿತ್ರಕ್ಕೆಪ್ರೇಕ್ಷಕರು ಮತ್ತು ವಿಮರ್ಶಕರಿಂದ ಹತ್ತಕ್ಕೆ 7.4 ಅಂಕ ದೊರೆತಿವೆ. ಮಮ್ಮುಟ್ಟಿ ಜತೆ ತಮಿಳು ಚಿತ್ರರಂಗದ ರಾಜ್‌ ಕಿರಣ್‌ ಮತ್ತು ಮೀನಾ ಕೂಡ ನಟಿಸಿದ್ದಾರೆ. ಬಿಬಿನ್‌ ಜಾರ್ಜ್‌ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ದಿಕಿ, ಬೈಜು ಸಂತೋಷ್‌, ಕಲಾಭವನ್‌ ಶಾಜಾನ್‌, ಅಜಯ್‌ ವಾಸುದೇವ, ಜಾನ್‌ ವಿಜಯ್‌ ಹರೀಶ್‌ ಕನರನ್‌ ಪಾತ್ರಗಳು ಮನದಲ್ಲಿ ಉಳಿಯುತ್ತವೆ. ತಮಿಳು ಭಾಷೆಯಲ್ಲೂ ಈ ಚಿತ್ರ ಬಿಡುಗಡೆಯಾಗಿದ್ದು ಚೆನ್ನೈ, ವೆಲ್ಲೂರುಗಳಲ್ಲಿ ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT