ADVERTISEMENT

‘ಮಂಡ್ಯದ ಗಂಡು’ ಸಿನಿಮಾ ಖ್ಯಾತಿಯ ನಿರ್ದೇಶಕ ಎ.ಟಿ. ರಘು ನಿಧನ

‘ಮಂಡ್ಯದ ಗಂಡು’ ಸಿನಿಮಾ ಖ್ಯಾತಿಯ ಹಿರಿಯ ನಿರ್ದೇಶಕ ಎ.ಟಿ. ರಘು ಗುರುವಾರ (ಮಾರ್ಚ್ 20) ರಾತ್ರಿ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2025, 4:28 IST
Last Updated 21 ಮಾರ್ಚ್ 2025, 4:28 IST
<div class="paragraphs"><p>ಅಂಬರೀಶ್ ಜೊತೆ ಎ.ಟಿ. ರಘು</p></div>

ಅಂಬರೀಶ್ ಜೊತೆ ಎ.ಟಿ. ರಘು

   

ಬೆಂಗಳೂರು:  ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ‌ ‘ಮಂಡ್ಯದ ಗಂಡು’ ಸಿನಿಮಾ ಖ್ಯಾತಿಯ ನಿರ್ದೇಶಕ, ನಟ ಎ.ಟಿ.ರಘು (78) ಗುರುವಾರ ರಾತ್ರಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಶುಕ್ರವಾರ ಮಧ್ಯಾಹ್ನ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು.

ರಘು 35ಕ್ಕೂ ಅಧಿಕ ಸಿನಿಮಾಗಳನ್ನು ನಿರ್ದೇಶಿಸಿದ್ದು, ಈ ಪೈಕಿ 28 ಸಿನಿಮಾಗಳು ಅಂಬರೀಶ್ ಅವರದ್ದು ಎನ್ನುವುದು ವಿಶೇಷ. ಅಂಬರೀಶ್‌ ನಾಯಕರಾಗಿದ್ದ ‘ನ್ಯಾಯ ನೀತಿ ಧರ್ಮ’ ಸಿನಿಮಾ ಮೂಲಕ ನಿರ್ದೇಶಕರಾದರು. ಬಳಿಕ ‘ಶಂಕರ್‌‌ ಸುಂದರ್’, ‘ಪ್ರೀತಿ’, ‘ಆಶಾ’, ‘ಇನ್‌ಸ್ಪೆಕ್ಟರ್ ಕ್ರಾಂತಿಕುಮಾರ್’, ‘ಗುರು ಜಗದ್ಗುರು‌’, ‘ಮಿಡಿದ ಹೃದಯಗಳು’, ‘ಅಂತಿಮ ತೀರ್ಪು’, ‘ಧರ್ಮಯುದ್ಧ’ ‘ಬೇಟೆಗಾರ’ ಹೀಗೆ ಸಾಲು ಸಾಲು ಸಿನಿಮಾಗಳನ್ನು ಅಂಬರೀಶ್‌ ಅವರಿಗೆ ನಿರ್ದೇಶಿಸಿದರು.

ADVERTISEMENT

ಟೈಗರ್ ಪ್ರಭಾಕರ್ ನಟಿಸಿದ ‘ಕಾಡಿನ ರಾಜ‌’, ‘ಅಜಯ್‌ ವಿಜಯ್‌’ ಸಿನಿಮಾಗಳನ್ನೂ ನಿರ್ದೇಶಿಸಿದ್ದರು. ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ‘ಮೇರಿ ಅದಾಲತ್‌’ ಸಿನಿಮಾದಲ್ಲಿ ರಜನಿಕಾಂತ್‌ ಅವರಿಗೆ ರಘು ಆ್ಯಕ್ಷನ್‌ ಕಟ್‌ ಹೇಳಿದ್ದರು. ಅಂಬರೀಶ್‌ ನಟನೆಯ ‘ಮೈಸೂರು ಜಾಣ’ ಸಿನಿಮಾ ಮೂಲಕ ಅವರು ನಿರ್ಮಾಪಕರಾದರು. ‘ಮಂಡ್ಯದ ಗಂಡು’ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದರು. 

ಮಡಿಕೇರಿಯವರಾದ ರಘು ವಿದ್ಯಾರ್ಥಿಯಾಗಿದ್ದಾಗ ‘ಮಿಸ್‌ ಲೀಲಾವತಿ’ ಸಿನಿಮಾದಲ್ಲಿ ಸಣ್ಣ ಪಾತ್ರವೊಂದಕ್ಕೆ ಬಣ್ಣ ಹಚ್ಚುವುದರ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.