ADVERTISEMENT

ಮಂಜು ವಾರಿಯರ್‌ ನನ್ನ ವೈರಿ ಅಲ್ಲ: ಮಲಯಾಳಂ ನಟ ದಿಲೀಪ್

ಮಾಜಿ ಪತ್ನಿ ಬಗ್ಗೆ ಮಲಯಾಳ ನಟ ದಿಲೀಪ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 10:43 IST
Last Updated 29 ಜೂನ್ 2020, 10:43 IST
ನಟ ದಿಲೀಪ್‌ –ಮಂಜು ವಾರಿಯರ್‌
ನಟ ದಿಲೀಪ್‌ –ಮಂಜು ವಾರಿಯರ್‌   

‘ನಟಿ ಮಂಜು ವಾರಿಯರ್‌ ನನ್ನ ವೈರಿ ಅಲ್ಲ. ಸಂದರ್ಭ ಬಂದರೆ ಆಕೆಯೊಂದಿಗೆ ಮತ್ತೆ ತೆರೆ ಹಂಚಿಕೊಳ್ಳಲು ಸಿದ್ಧ’

– ತಮ್ಮ ಮಾಜಿ ಪತ್ನಿ ಮಂಜು ವಾರಿಯರ್‌ ಜತೆ ನಟಿಸುವ ಕುರಿತುಕೇಳಿದ ಪ್ರಶ್ನೆಗೆಮಲಯಾಳ ಚಿತ್ರರಂಗದ ಸ್ಟಾರ್‌ ನಟ ದಿಲೀಪ್‌ ನೀಡಿದ ಉತ್ತರವಿದು.

‘ಮಂಜು ಮತ್ತು ನಾನು ಈಗಲೂ ಒಳ್ಳೆಯ ಸ್ನೇಹಿತರು. ಇಬ್ಬರ ನಡುವೆ ಯಾವುದೇ ಮುನಿಸಿಲ್ಲ. ಡೈವೋರ್ಸ್‌ ಪಡೆದ ಮಾತ್ರಕ್ಕೆ ನಾವೇನೂ ವೈರಿಗಳಲ್ಲ. ಈಗಲೂ ಪರಸ್ಪರ ಗೌರವಿಸುತ್ತೇವೆ. ನಮ್ಮ ಸಂಬಂಧ ಚೆನ್ನಾಗಿದೆ’ ಎಂದು ದಿಲೀಪ್‌ ಹೇಳಿದ್ದಾರೆ.

ADVERTISEMENT

2015ರಲ್ಲಿ ವಿಚ್ಛೇದನ ಪಡೆಯುವ‌ ಮೂಲಕ 16 ವರ್ಷಗಳ ದಾಂಪತ್ಯಕ್ಕೆ ಇಬ್ಬರೂ ಅಂತ್ಯ ಹಾಡಿದ್ದರು. ಮರುವರ್ಷವೇ ದಿಲೀಪ್‌ ಅವರು ನಟಿ ಕಾವ್ಯ ಮಾಧವನ್‌ ಕೈಹಿಡಿದಿದರು.

ಮಂಜು ವಾರಿಯರ್ ಜತೆಗಿನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಕಾವ್ಯ ಖಂಡಿತ ಕಾರಣಳಲ್ಲ. ನಮ್ಮಿಬ್ಬರ ನಡುವಿನ ವೈಯಕ್ತಿಕ ಸಮಸ್ಯೆ ಕಾರಣ ಎಂದು ದಿಲೀಪ್‌ ಹೇಳಿದ್ದಾರೆ. ದಿಲೀಪ್ ಮತ್ತು ಮಂಜು ವಾರಿಯರ್ ಜೋಡಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.