ADVERTISEMENT

ವೈರಲ್ ಆದ ‘ಮಾರಾಯ’

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 7:55 IST
Last Updated 1 ಏಪ್ರಿಲ್ 2022, 7:55 IST
ವಿನಯಾ ಪ್ರಸಾದ್‌
ವಿನಯಾ ಪ್ರಸಾದ್‌   

‘ಮಾರಾಯ’ ಚಿತ್ರಕ್ಕೆ ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯ ಯು/ಎ ಪ್ರಮಾಣ ಪತ್ರ ಸಿಕ್ಕಿದೆ.ಉದಯ್‌ಪ್ರೇಮ್ ನಿರ್ದೇಶನ, ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಈ ಚಿತ್ರಕ್ಕಿದೆ. ಚಿತ್ರದ ಟ್ರೈಲರ್‌ ಕೆಎನ್‌ಎಸ್‌ ಡಿಜಿಟಲ್‌ನ ಯುಟ್ಯೂಬ್‌ ಚಾನೆಲ್‌ನಲ್ಲಿ ವೀಕ್ಷಿಸಬಹುದು.

ತಾರಾಗಣದಲ್ಲಿ ಹಿರಿಯ ನಟಿ ವಿನಯಾ ಪ್ರಸಾದ್, ಡಿಂಗ್ರಿನಾಗರಾಜ್, ಬಿಗ್‌ಬಾಸ್ ಖ್ಯಾತಿಯ ದಿವಾಕರ್, ಸಲಗ ಸೂರಿಯಣ್ಣ (ದಿನೇಶ್), ಮಜಾಭಾರತದ ಚಿಲ್ಲರ್‌ಮಂಜು, ಬಸು, ಜಿಕೆ, ಮೈ ಆಟೋ ಗ್ರಾಫ್‌ನ ಕುಮಾರ್‌ದೇವ್, ಮಣಿ, ಶ್ರೇಯ, ತೀನಾತಿಮಯ್ಯ, ಸ್ನೇಹ ಮುಂತಾದವರು ನಟಿಸಿದ್ದಾರೆ.

ವಿನುಮನಸು ಅವರ ಸಂಗೀತ,ಉದಯಾನಂದ ಬರ್ಕೆ ಅವರ ಛಾಯಾಗ್ರಹಣ, ಶಿವಕುಮಾರ್.ಎಸಂಕಲನ, ಚಂದ್ರುಬಂಡೆ ಅವರ ಸಾಹಸವಿದೆ.ಚಿತ್ರವು ಮೇ ತಿಂಗಳಲ್ಲಿ ತೆರೆಗೆ ಬರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.