ADVERTISEMENT

ಮಾರ್ವಲಸ್‌ ಕೈ ಸೇರಿದ ‘ಡೆಡ್‌ಪೂಲ್‌’

Marvel deadpool

​ಪ್ರಜಾವಾಣಿ ವಾರ್ತೆ
Published 1 ಜನವರಿ 2020, 19:45 IST
Last Updated 1 ಜನವರಿ 2020, 19:45 IST
ಎಮಾ ವ್ಯಾಟ್
ಎಮಾ ವ್ಯಾಟ್   

ರೈನ್‌ ರೆನಾಲ್ಡ್‌ನ ‘ಡೆಡ್‌ಪೂಲ್‌’ ಸಿನಿಮಾಗಳು ವೀಕ್ಷಕರಲ್ಲಿ ಬಹಳ ಜನಪ್ರಿಯತೆ ಪಡೆದಿವೆ. 2016 ಮತ್ತು 2018 ರಲ್ಲಿ ರಿಲೀಸ್‌ ಆದ ಡೆಡ್‌ಪೂಲ್‌ ಚಿತ್ರಗಳು ದೊಡ್ಡ ಯಶಸ್ಸು ಕಂಡಿತ್ತು.

ಮಾರ್ವಲ್‌ ಸ್ಟುಡಿಯೋ ಐರನ್‌ ಮ್ಯಾನ್‌, ಅವೆಂಜರ್ಸ್‌, ಕ್ಯಾಪ್ಟನ್‌ ಅಮೆರಿಕಾ ಮಾದರಿಯ ಸಿನಿಮಾಗಳನ್ನು ನೀಡುವ ಮೂಲಕ ಒಂದು ರೀತಿಯಲ್ಲಿ ಹಾಲಿವುಡ್‌ನಲ್ಲಿ ದರ್ಬಾರ್‌ ಮಾಡ್ತಿದೆ.ಡೆಡ್‌ಪೂಲ್‌ ಮಾರ್ವಲ್‌ ಸ್ಟುಡಿಯೋದ ಸಿನಿಮಾಗಳಲ್ಲಿ ಠಕ್ಕರ್‌ ಕೊಡುತ್ತಿತ್ತು. ಆದರೆಇನ್ಮುಂದೆ ‘ಡೆಡ್‌ಪೂಲ್’ ಚಿತ್ರಗಳು ಕೂಡ ಮಾರ್ವಲ್‌ ಸ್ಟುಡಿಯೋದಲ್ಲಿ ನಿರ್ಮಾಣವಾಗಲಿದೆ. ‘ಡೆಡ್‌ಪೂಲ್‌’ ನಿರ್ಮಾಪಕರಲ್ಲಿಎಮಾ ವ್ಯಾಟ್‌ ಕೂಡ ಒಬ್ಬರು. ಡೆಡೆಪೂಲ್‌ ಮಾರ್ವಲ್‌ ಕೈ ಸೇರಿದ್ದರಿಂದ ಬೇಸರಗೊಂಡ ಎಮಾ, ಚಿತ್ರತಂಡದಿಂದ ಹೊರಬಂದಿದ್ದಾರೆ.ಈ ಹಿಂದೆ ಡಿಸ್ನಿ ಮಾಲೀಕತ್ಚದ 29ತ್‌ ಸೆಂಚ್ಯುರಿ ಫಾಕ್ಸ್‌ ಪ್ರೊಡಕ್ಷನ್‌ನ ಅಧ್ಯಕ್ಷರಾಗಿ ಎಮಾ ಕಾರ್ಯ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT