ADVERTISEMENT

ಏ ಪುನೀತ... ಕರುನಾಡೇ ಪುನೀತ...‘ಅಪ್ಪು’ಗೆ ಅಳುವ ಹಾಡೇಕೆ? ಮಧುರ ನೆನಪೂ ಬೇಕಲ್ಲವೇ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2022, 13:11 IST
Last Updated 15 ಮಾರ್ಚ್ 2022, 13:11 IST
ಹಾಲೇಶ್‌ ಮಳಿಗೇರ್‌
ಹಾಲೇಶ್‌ ಮಳಿಗೇರ್‌   

ಅಪ್ಪು ಅವರ ಅಗಲಿಕೆ ಸಂಬಂಧಿಸಿ ಅಳುವ ಹಾಡುಗಳು ಬಂದದ್ದಾಯಿತು. ಒಂದು ಮಾಧುರ್ಯದ ಹಾಡೇಕೆ ಇರಬಾರದು?

ಹೀಗೆಂದುಕೊಂಡಾಗ ಹೊಳೆದ ಸಾಲೇ ‘ಕರುನಾಡೇ ಪುನೀತ...’.ಹೀಗೆಂದು ಒಂದೇ ಉಸಿರಿನಲ್ಲಿ ವಿವರಿಸಿದರು ಹಾಲೇಶ್‌ ಮಳಿಗೇರ್‌.

‘ಏ ಪುನೀತಾ... ಏ ಪುನೀತಾ...’ ಎಂದು ಕರೆಯುವ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದೆ. ಈ ಹಾಡು ಎ2 ಎಂಟರ್‌ಟೈನ್‌ಮೆಂಟ್‌ನ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

ADVERTISEMENT

ನಾದಿರಾ ಬಾನು, ಶರಣ್‌ ಅಯ್ಯಪ್ಪ ಈ ಹಾಡು ಹಾಡಿದ್ದಾರೆ. ಎ.ಟಿ. ರವೀಶ್‌ ಅವರ ಸಂಗೀತವಿದೆ. ಪುನೀತ್‌ ಅವರು ಪಾಲ್ಗೊಂಡ ಶೂಟಿಂಗ್‌ ಸಂದರ್ಭಗಳು, ಅವರ ಚಿತ್ರಗಳ ತುಣುಕುಗಳು, ಛಾಯಾಚಿತ್ರ ಹಾಗೂ ಅವರ ನಿಧನದ ಸಂದರ್ಭದ ದೃಶ್ಯಗಳನ್ನು ಸೇರಿಸಿ ಕೊಲಾಜ್‌ ರೀತಿಯವಿಡಿಯೋ ರೂಪಿಸಲಾಗಿದೆ. ಸಾವಿರಾರು ಜನರು ಈ ವಿಡಿಯೋ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಪುನೀತ್‌ ಅವರನ್ನು ಭೇಟಿಯಾಗಿ ಮಾತನಾಡಲು ಸಮಯ ನಿಗದಿಯೂ ಮಾಡಿಕೊಂಡಿದ್ದೆ. ಆದರೆ, ದುರಾದೃಷ್ಟ ನೋಡಿ ಅವರಲ್ಲಿ ದೂರವಾಣಿ ಮೂಲಕ ಮಾತನಾಡಿದ್ದೇ ಬಂತು. ನಮ್ಮನ್ನು ಅಗಲಿಯೇಬಿಟ್ಟರು’ ಎಂದು ಬೇಸರಿಸಿದರು ಮಳಿಗೇರ್‌.

ಮಳಿಗೇರ್‌ ಅವರು ಮ್ಯೂಸಿಕ್‌ ಚಾನೆಲ್‌ವೊಂದರಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.