ADVERTISEMENT

ಮಿಟೂ ದುರುಪಯೋಗ ಸಲ್ಲದು: ರಾಗಿಣಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 8:53 IST
Last Updated 16 ಅಕ್ಟೋಬರ್ 2018, 8:53 IST
   

ಹುಬ್ಬಳ್ಳಿ: 'ಮಿಟೂ ಒಳ್ಳೆಯ ಅಭಿಯಾನವಾಗಿದ್ದು, ದೌರ್ಜನ್ಯಕ್ಕೆ ಒಳಗಾಗಿರುವ ಎಲ್ಲರೂ ಧ್ವನಿ ಎತ್ತಬೇಕು. ಆದರೆ ಇದನ್ನು ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ' ಎಂದು ನಟಿ ರಾಗಿಣಿಹೇಳಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. 'ನನಗೆ ಅಂತಹ ಯಾವುದೇ ಕೆಟ್ಟ ಅನುಭವವಾಗಿಲ್ಲ. ಒತ್ತಡ ಸೇರಿದಂತೆ ಹಲವು ಕಾರಣಗಳಿಗಾಗಿ ಅಂತಹ ಘಟನೆಗಳು ನಡೆಯುತ್ತವೆ. ಪುರುಷ- ಮಹಿಳೆ ಭೇದ ಇಲ್ಲದೆ ಎಲ್ಲರೂ ಇದರ ವಿರುದ್ಧ ಧ್ವನಿ ಎತ್ತಬಹುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.