‘ಮಿರಾಯ್’: ‘ವೈಬ್ ಐತೆ ಬೇಬಿ’ ಎಂದ ತೇಜ್ ಸಜ್ಜಾ
ತೆಲುಗಿನಲ್ಲಿ ‘ಹನುಮಾನ್’ ಚಿತ್ರದ ಮೂಲಕ ಮೋಡಿ ಮಾಡಿದ್ದ ನಟ ತೇಜ್ ಸಜ್ಜಾ ಅಭಿನಯದ ಹೊಸ ಪ್ಯಾನ್ ಇಂಡಿಯಾ ಸಿನಿಮಾ ‘ಮಿರಾಯ್’ ಸೆ.5ರಂದು ತೆರೆಕಾಣುತ್ತಿದೆ. ಸಿನಿಮಾದ ಮೊದಲ ಹಾಡು ‘ವೈಬ್ ಐತೆ ಬೇಬಿ’ ಬಿಡುಗಡೆಯಾಗಿದೆ.
ಹಾಡಿನಲ್ಲಿ ನಾಯಕ ತೇಜ್ ಸಜ್ಜಾ ಮತ್ತು ನಾಯಕಿ ರಿತಿಕಾ ನಾಯಕ್ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ. ತೆಲುಗಿನ ಜೊತೆಗೆ ಕನ್ನಡದಲ್ಲೂ ಈ ಹಾಡು ಬಿಡುಗಡೆಯಾಗಿದ್ದು, ಗಾಯಕ ಅರ್ಮಾನ್ ಮಲಿಕ್ ದನಿಯಾಗಿದ್ದಾರೆ. ಗೌರ ಹರಿ ಸಂಗೀತ, ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ಕನ್ನಡದ ಹಾಡಿಗಿದೆ. ‘ಕಾರ್ತಿಕೇಯ’, ‘ಕಾರ್ತಿಕೇಯ-2’, ‘ಧಮಾಕ’ ಸೇರಿದಂತೆ ಹಲವು ಹಿಟ್ ಚಿತ್ರಗಳ ಸಾರಥಿ ಕಾರ್ತಿಕ್ ಗಟ್ಟಮ್ನೇನಿ ಸಜ್ಜಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಹನುಮಾನ್’ನಲ್ಲಿ ಸೂಪರ್ ಹೀರೊ ಆಗಿದ್ದ ತೇಜ್ ಈಗ ‘ಮಿರಾಯ್’ನಲ್ಲಿ ಸೂಪರ್ ಯೋಧನಾಗಿದ್ದಾರೆ.
‘ಮಿರಾಯ್’ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯಗಳಿದ್ದು, ಇವುಗಳನ್ನು ಕಾರ್ತಿಕ್ ಗಟ್ಟಮ್ನೇನಿ ನಿರ್ದೇಶಿಸಿದ್ದಾರೆ. ವಿಶೇಷವಾಗಿ ಈ ಚಿತ್ರ 2ಡಿ ಮತ್ತು 3ಡಿ ರೂಪದಲ್ಲಿ ರಿಲೀಸ್ ಆಗುತ್ತಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿಯಡಿ ಟಿ.ಜಿ.ವಿಶ್ವಪ್ರಸಾದ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.