ADVERTISEMENT

‘ಮಾಂಕ್ ದಿ ಯಂಗ್’ ಪೋಸ್ಟರ್‌ ಬಂತು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 8:46 IST
Last Updated 4 ಆಗಸ್ಟ್ 2022, 8:46 IST
ಸೌಂದರ್ಯ ಗೌಡ, ಸರೋವರ್‌
ಸೌಂದರ್ಯ ಗೌಡ, ಸರೋವರ್‌   

ಹೊಸಬರ ತಂಡ, ಮಾಜಿ ಸೈನಿಕರೊಬ್ಬರ ನಿರ್ಮಾಣ ಮತ್ತು ನಟನೆ, ಈ ಚಿತ್ರದ ಹೆಸರು ‘ಮಾಂಕ್‌ ದಿ ಯಂಗ್‌’. ಇತ್ತೀಚೆಗಷ್ಟೇ ನಟ ನಿರ್ದೇಶಕ ರಿಷಭ್‌ ಶೆಟ್ಟಿ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್‌ ಪೋಸ್ಟರ್‌ ಬಿಡುಗಡೆ ಮಾಡಿದರು. ಚಿತ್ರದ ಮೇಕಿಂಗ್‌ ತುಣುಕುಗಳೂ ಜಾಲತಾಣಗಳಲ್ಲಿ ಹರಿದಾಡಿ ಕುತೂಹಲ ಹುಟ್ಟಿಸಿವೆ.

ಸರೋವರ್‌ ಈ ಚಿತ್ರದ ನಾಯಕ, ಸೌಂದರ್ಯ ಗೌಡ ನಾಯಕಿ. ಕರ್ನಲ್‌ ರಾಜೇಂದ್ರನ್‌ ಸೇರಿ ಐವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

‘ಇದು ನನ್ನ ಮೊದಲ ನಿರ್ದೇಶನದ ಚಿತ್ರ. ವಿಂಟೇಜ್, ಫ್ಯಾಂಟಸಿ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್‌ ಕಾರ್ಯ ಬಿರುಸಿನಿಂದ ಸಾಗಿದೆ’ ಎಂದರು ನಿರ್ದೇಶಕಮಾಸ್ಚಿತ್ ಸೂರ್ಯ.

ADVERTISEMENT

‘ನಾನು ಹದಿನೇಳನೇ ವಯಸ್ಸಿನಲ್ಲೇ ಸೈನ್ಯ ಸೇರಿದೆ. 40 ವರ್ಷ ಅಲ್ಲಿ ಸೇವೆ ಸಲ್ಲಿಸಿದ್ದೇನೆ. ಅಲ್ಲಿಂದ ಬಂದ ಮೇಲೆ ನನಗೆ ಚಿತ್ರದಲ್ಲಿ ನಟಿಸುವ ಆಸೆಯಾಯಿತು. ಈ ಹಿಂದೆಯೂ ಚಿತ್ರದಲ್ಲಿ ಅಭಿನಯಿಸಿದ್ದೆ. ಇದು ಎರಡನೇ ಚಿತ್ರ’ ಎಂದರು ನಿರ್ಮಾಪಕರಲ್ಲೊಬ್ಬರಾದ ಕರ್ನಲ್ ರಾಜೇಂದ್ರನ್.

ನಿರ್ಮಾಪಕರಾಗಿರುವ ವಿನಯ್ ಬಾಬು ರೆಡ್ಡಿ, ಲಾಲ್ ಚಂದ್, ಗೋಪಿ ಚಂದ್,ನಟಿ ಉಷಾ ಭಂಡಾರಿ ತಾರಾಗಣದಲ್ಲಿದ್ದಾರೆ.

‘ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡುತ್ತೇವೆ. ಟ್ರೇಲರ್ ನೋಡಿ ನೀವೇ ತೀರ್ಮಾನಿಸಿ. ನಿಜಕ್ಕೂ ಒಳ್ಳೆಯ ಅಡುಗೆ ಎಲ್ಲರಿಗೂ ರುಚಿಸುವ ಹಾಗೆ, ನಮ್ಮ ಚಿತ್ರ ಸಹ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ’ ಎಂದರು ಚಿತ್ರದ ನಿರ್ಮಾಪಕ ಹಾಗೂ ನಾಯಕ ಸರೋವರ.

‘ನಾನು ಹೊಳೆನರಸೀಪುರದ ಹುಡುಗಿ. ನಾನು ಸಿವಿಲ್ ಎಂಜಿನಿಯರಿಂಗ್ ಓದಿ ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿದ್ದೆ‌. ಆದರೆ ನಟನೆಯ ಮೇಲಿನ ಆಸಕ್ತಿಯಿಂದ ಕೆಲಸ ಬಿಟ್ಟು ಬಂದು ಈ ಚಿತ್ರದಲ್ಲಿ ನಟಿಸಿದ್ದೇನೆ. ಇದು ನನ್ನ ಮೊದಲ ಚಿತ್ರ. ರೂಪದರ್ಶಿಯಾಗಿಯೂ ಸಾಕಷ್ಟು ಹೆಸರು ‌ಮಾಡಿದ್ದೇನೆ. ಈ ಚಿತ್ರದ ಕಥೆ ಬ್ರಿಟೀಷರ ಕಾಲದಲ್ಲಿ ನಡೆಯುತ್ತದೆ. ಹಾಗಾಗಿ ಈ ಶೀರ್ಷಿಕೆ ಇಟ್ಟಿದ್ದಾರೆ’ ಎಂದು ನಾಯಕಿ ಸೌಂದರ್ಯ ಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.