ADVERTISEMENT

ಸಿನಿ ಬಿಟ್ಸ್: ಸೆಲೆಬ್ರಿಟಿಗಳ ತಾಯಿ ಪ್ರೀತಿ

​ಪ್ರಜಾವಾಣಿ ವಾರ್ತೆ
Published 12 ಮೇ 2023, 19:32 IST
Last Updated 12 ಮೇ 2023, 19:32 IST
ಸಂಯುಕ್ತ ಹಾಗೂ ಸುಧಾ ಬೆಳವಾಡಿ 
ಸಂಯುಕ್ತ ಹಾಗೂ ಸುಧಾ ಬೆಳವಾಡಿ    

ಭಾನುವಾರ (ಮೇ 14) ವಿಶ್ವ ಅಮ್ಮಂದಿರ ದಿನ. ಈ ಹೊತ್ತಿನಲ್ಲಿ ‘ಎಂದಿಗೂ ಸಾಲದು ನಿನ್ನ ಪ್ರೀತಿ ಅಮ್ಮ’ ಎನ್ನುತ್ತಾ ಬಂದಿದ್ದಾರೆ ಗಾಯಕ ವಾಸುಕಿ ವೈಭವ್‌. ಅವರ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ಶನಿವಾರ (ಮೇ 13) ಸಂಜೆ ಆನಂದ್‌ ಆಡಿಯೊ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ. 

ಹಾಡಿಗೆ ಅನಿತಾ ರಂಗಸ್ವಾಮಿ ಸಾಹಿತ್ಯವಿದೆ. ವಿಶೇಷವೆಂದರೆ ಚಿತ್ರರಂಗ ಹಾಗೂ ಕಿರುತೆರೆಯ ಹಲವು ಕಲಾವಿದರು ತಮ್ಮ ತಾಯಿ ಅಥವಾ ಮಕ್ಕಳ ಜೊತೆ ಈ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೇ ಹಾಡಿನಲ್ಲಿ ಹಲವು ಸೆಲೆಬ್ರಿಟಿಗಳು ತಮ್ಮ ತಾಯಿಯ ಜೊತೆಗಿರುವ ದೃಶ್ಯ ಕಾಣಸಿಗುವುದು ಅಪರೂಪ. ಈ ಬಾರಿಯ ವಿಶೇಷ ದಿನಕ್ಕೆ ಇದು ಅಭಿಮಾನಿಗಳಿಗೆ ನಮ್ಮಿಂದ ಒಂದು ಕೊಡುಗೆ ಎಂದಿದ್ದಾರೆ ಅನಿತಾ. 

ದಿಗಂತ್‌, ಸುಧಾರಾಣಿ, ಅನು ಪ್ರಭಾಕರ್‌–ಗಾಯತ್ರಿ ಪ್ರಭಾಕರ್‌, ಶ್ರುತಿ ಹರಿಹರನ್‌, ಪದ್ಮಜಾ ರಾವ್‌, ಸುಧಾ ಬೆಳವಾಡಿ–ಸಂಯುಕ್ತ ಹೊರನಾಡು, ರಾಧಾ ರಾಮಚಂದ್ರನ್‌, ‘ಪುಟ್ಟಗೌರಿ ಮದುವೆ’ ಖ್ಯಾತಿಯ ಹರಿಣಿ ಶ್ರೀಕಾಂತ್‌, ‘ನನ್ನರಸಿ ರಾಧೆ’ ಹಾಗೂ ‘ತ್ರಿಪುರ ಸುಂದರಿ’ ಧಾರಾವಾಹಿ ಖ್ಯಾತಿಯ ಅಭಿನವ್‌ ವಿಶ್ವನಾಥನ್‌, ‘ಕನ್ನಡತಿ’ ಖ್ಯಾತಿಯ ರಂಜನಿ ರಾಘವನ್‌, ವಾಸು ದೀಕ್ಷಿತ್‌ ಮುಂತಾದವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.       

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.