ADVERTISEMENT

‘ಮೇಡ್‌ ಇನ್‌ ಚೀನಾ’ದಲ್ಲೂ ಮೌನಿ ರಾಯ್‌

​ಪ್ರಜಾವಾಣಿ ವಾರ್ತೆ
Published 19 ಜುಲೈ 2018, 14:35 IST
Last Updated 19 ಜುಲೈ 2018, 14:35 IST
ಮೌನಿ ರಾಯ್‌
ಮೌನಿ ರಾಯ್‌   

ಬಾಲಿವುಡ್‌ನಲ್ಲಿ ಹೊಸ ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ‘ನಾಗಿನಿ’ ಮೌನಿ ರಾಯ್‌ಗೆ ಮತ್ತೊಂದು ಚಿತ್ರದ ಬಾಗಿಲು ತೆರೆದುಕೊಂಡಿದೆ.ಮಿಖಿಲ್‌ ಮುಸಲೆ ನಿರ್ದೇಶನದ ‘ಮೇಡ್‌ ಇನ್‌ ಚೈನಾ’ ಚಿತ್ರದ ನಾಯಕಿಯಾಗಿ ಅವರು ಆಯ್ಕೆಯಾಗಿದ್ದಾರೆ.ಈಗಾಗಲೇ ‘ಗೋಲ್ಡ್‌’ ಮತ್ತು ‘ಬ್ರಹ್ಮಾಸ್ತ್ರ’ಕ್ಕೆ ಸಹಿ ಹಾಕಿರುವ ಮೌನಿಗೆ ಅಲ್ಪಾವಧಿಯಲ್ಲಿಯೇ ಹ್ಯಾಟ್ರಿಕ್‌ ಅವಕಾಶ ಸಿಕ್ಕಿದಂತಾಗಿದೆ.

ಹಾಸ್ಯದ ರಸದೌತಣವನ್ನೇ ಉಣಬಡಿಸುವ ಆಶ್ವಾಸನೆಯೊಂದಿಗೆ ಸುದ್ದಿ ಮಾಡುತ್ತಿರುವ ‘ಮೇಡ್ ಇನ್‌ ಚೈನಾ’ ಚಿತ್ರದಲ್ಲಿ, ನಾಯಕ ರಾಜ್‌ಕುಮಾರ್‌ ರಾವ್ ಪತ್ನಿಯಾಗಿ ಮೌನಿ ನಟಿಸಲಿದ್ದಾರೆ. ಈ ಸುದ್ದಿಯನ್ನು ಸ್ವತಃ ಮೌನಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ.

ಚಿತ್ರದಲ್ಲಿ ರಾಜ್‌ಕುಮಾರ್‌ ಗುಜರಾತಿ ಉದ್ಯಮಿಯ ಗೆಟಪ‍್ಪಿನಲ್ಲೂ, ಮೌನಿ ಮುಂಬೈ ಯುವತಿಯ ಗೆಟಪ್ಪಿನಲ್ಲೂ ಮಿಂಚಲಿದ್ದಾರೆ. ಮದುವೆಯಾದ ಬಳಿಕ ದಂಪತಿ ಅಹಮದಾಬಾದ್‌ನಲ್ಲಿ ನೆಲೆಸುತ್ತಾರೆ. ಹೀಗಾಗಿ,ಚಿತ್ರದ ಚಿತ್ರೀಕರಣ ಮುಂಬೈ, ಗುಜರಾತ್‌ ಮತ್ತು ಚೀನಾದಲ್ಲಿ ನಡೆಯಲಿದೆ. ಇದೇ ಸೆಪ್ಟೆಂಬರ್‌ನಲ್ಲಿ ಚಿತ್ರ ತೆರೆ ಕಾಣುವ ನಿರೀಕ್ಷೆಯಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.