ADVERTISEMENT

‘ಮಿ. ಲೋಕಲ್‌’ ವಿಳಂಬ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 12:45 IST
Last Updated 22 ಏಪ್ರಿಲ್ 2019, 12:45 IST
ಶಿವಕಾರ್ತಿಕೇಯನ್‌–ನಯನತಾರಾ
ಶಿವಕಾರ್ತಿಕೇಯನ್‌–ನಯನತಾರಾ   

ನಯನತಾರಾ ಮತ್ತು ಶಿವಕಾರ್ತಿಕೇಯನ್‌ ಜೋಡಿಯ ಕಾಮಿಡಿ ಚಿತ್ರ ‘ಮಿಸ್ಟರ್ ಲೋಕಲ್‌’ ಕಾರ್ಮಿಕರ ದಿನದಂದು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಮುಂದಿನ 17ಕ್ಕೆ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್‌ ಆಗಿದೆ.

ತಮಿಳು ನಟರಾದ ಯೋಗಿ ಬಾಬು ಮತ್ತು ಸತೀಶ್‌ ಕೂಡಾ ಮುಖ್ಯ ಪಾತ್ರದಲ್ಲಿ ನಟಿಸಿರುವ ಮಿಸ್ಟರ್ ಲೋಕಲ್‌, ಈ ವರ್ಷದ ಮಹತ್ವದ ಚಿತ್ರಗಳಲ್ಲೊಂದು. ಎಂ.ರಾಜೇಶ್‌ ನಿರ್ದೇಶನದ ಈ ಚಿತ್ರದ ಮೂಲಕ ನಯನತಾರಾ–ಶಿವ ಜೋಡಿ ಎರಡನೇ ಬಾರಿಗೆ ಒಂದಾಗಿದ್ದರು. ಹಿಪ್‌ ಹಾಪ್‌ ತಮಿಜಾ ಸಂಗೀತ ನಿರ್ದೇಶಿಸಿರುವ ಈ ಚಿತ್ರಕ್ಕೆ ದಿನೇಶ್‌ ಕೃಷ್ಣನ್‌ ಸಿನೆಮಾಟೊಗ್ರಫಿ ಮಾದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT