ADVERTISEMENT

ರಾಜಸ್ಥಾನ ಚಿತ್ರೋತ್ಸವಕ್ಕೆ ‘ಮೃತ್ಯೋರ್ಮಾ ಅಮೃತಂಗಮಯ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 13:07 IST
Last Updated 6 ಫೆಬ್ರುವರಿ 2022, 13:07 IST
‘ಮೃತ್ಯೋರ್ಮಾ ಅಮೃತಂಗಮಯ’ ಚಿತ್ರದ ಪೋಸ್ಟರ್‌
‘ಮೃತ್ಯೋರ್ಮಾ ಅಮೃತಂಗಮಯ’ ಚಿತ್ರದ ಪೋಸ್ಟರ್‌   

ಸಕ್ಸೆಸ್‌ ಫಿಲ್ಮ್ಸ್ ಲಾಂಛನದ ಅಡಿ ಸುಧೀರ್‌ ಅತ್ತಾವರ ನಿರ್ದೇಶನದ ‘ಮೃತ್ಯೋರ್ಮಾ ಅಮೃತಂಗಮಯ’ ಚಿತ್ರವು ರಾಜಸ್ಥಾನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಾದೇಶಿಕ ಚಿತ್ರಗಳ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಬಿಡಿಟಿ ಅಭಿಯಂತರರ ಚಿತ್ರ ಪ್ರೊಡಕ್ಷನ್ಸ್‌ ಅಡಿ ತ್ರಿವಿಕ್ರಮ ಬೆಳ್ತಂಗಡಿ ಅವರು ಈ ಚಿತ್ರ ನಿರ್ಮಿಸಿದ್ದಾರೆ. ಮಾರ್ಚ್‌ 25ರಿಂದ 30ರವರೆಗೆ ರಾಜಸ್ಥಾನದ ಜೋಧ್‌ಪುರದಲ್ಲಿ ಈ ಚಿತ್ರೋತ್ಸವ ನಡೆಯಲಿದೆ.

‘ಮೃತ್ಯೋರ್ಮಾ ಅಮೃತಂಗಮಯ’ ಚಿತ್ರದಲ್ಲಿ ರಾಕೇಶ್‌ ಅಡಿಗ,ಹರ್ಷಿಕಾ ಪೂಣಚ್ಚ, ಉಷಾ ಉತ್ತುಪ್‌, ಸ್ಮಿತಾ ತಾರಾಗಣದಲ್ಲಿದ್ದಾರೆ. ವೀರಸಮರ್ಥ್ ಮತ್ತು ರವಿ ಬಸ್ರೂರು ಸಂಗೀತವಿದೆ. ಆನಂದ ಅರಸು ಅವರ ಛಾಯಾಗ್ರಹಣ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.