ADVERTISEMENT

ಪಡ್ಡೆ ಹೈಕ್ಳ ಕೆಣಕುವ ಮೈ ನೇಮ್ ಈಸ್ ರಾಜಾ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 11:25 IST
Last Updated 26 ಜನವರಿ 2020, 11:25 IST
ಆಕರ್ಷಿಕಾ
ಆಕರ್ಷಿಕಾ   

ಹಸಿ ಬಿಸಿ ದೃಶ್ಯಗಳಿಂದಲೇ ಪಡ್ಡೆ ಹುಡುಗರ ಮೈಬಿಸಿ ಹೆಚ್ಚಿಸಿತ್ತು ‘ಮೈ ನೇಮ್ ಈಸ್ ರಾಜಾ’ ಚಿತ್ರದ ಟೀಸರ್‌. ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಹಾಡುಗಳೂ ಲಿಪ್‌ಲಾಕ್‌ ಮತ್ತು ಹಸಿಬಿಸಿ ದೃಶ್ಯಮಯವಾಗಿವೆ. ಈ ಚಿತ್ರ ಇದೇ 31ರಂದು ತೆರೆಕಾಣಲಿದೆ.

ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆಅಶ್ವಿನ್ ಕೃಷ್ಣಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಅವರು ಚಿತ್ರ ತಂಡದೊಂದಿಗೆ ಸುದ್ದಿಗೋಷ್ಠಿಗೆ ಹಾಜರಾಗಿದ್ದರು. ‘ಚಿತ್ರದ ಹಾಡುಗಳು ತುಂಬಾ ಚೆನ್ನಾಗಿ‌ ಮೂಡಿಬಂದಿವೆ. ಇದೊಂದು ಸಂಪೂರ್ಣ ಮನರಂಜನೆಯ ಸಿನಿಮಾ.ಪ್ರೇಕ್ಷಕನ ಆಸಕ್ತಿ ಮತ್ತು ಕುತೂಹಲ ಕೆರಳಿಸುವುದು ಖರೆ.ಪಕ್ಕಾ ಪೈಸಾ ವಸೂಲ್ ಸಿನಿಮಾ‌ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ಅಶ್ವಿನ್‌ ವಿಶ್ವಾಸ ವ್ಯಕ್ತಪಡಿಸಿದರು.

ನಾಯಕನಾಗಿ ನಟಿಸಿರುವ ರಾಜ್ ಸೂರ್ಯನ್‌ಗೆ ಇದು ಚೊಚ್ಚಲ ಸಿನಿಮಾ. ‘ಇದು ಬೇರೆಯ ಥರದ್ದೇ ಸಿನಿಮಾವಾದರೂ ಕುಟುಂಬ ನೋಡುವಂತಹ ಸಿನಿಮಾ. ಗಂಡ– ಹೆಂಡತಿಯ ಅನುಬಂಧ ಹೇಗಿರುತ್ತದೆ ಎನ್ನುವುದನ್ನುನಿರ್ದೇಶಕರು ತೋರಿಸಿದ್ದಾರೆ’ ಎನ್ನುವ ಮಾತು ಸೇರಿಸಿದರು ರಾಜ್.

ADVERTISEMENT

ಈ ಚಿತ್ರಕ್ಕೆ ಬಂಡವಾಳ ಹೂಡಿರುವಪ್ರಭು ಸೂರ್ಯ ‘ಹಾಡುಗಳಲ್ಲಿ ಸ್ವಲ್ಪ ಕಥೆಯನ್ನು ಬಿಟ್ಟುಕೊಟ್ಟಿದ್ದಾರೆ ನಿರ್ದೇಶಕರು. ಹಾಡುಗಳ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ. ಈಗಾಗಲೇಸೋಷಿಯಲ್ ಮೀಡಿಯಾದಲ್ಲೂ ಹಾಡುಗಳ ಬಗ್ಗೆ ಮೆಚ್ಚುಗೆಯ ಪ್ರತಿಕ್ರಿಯೆಗಳು ಬರುತ್ತಿವೆ.ಸಿನಿಮಾಗಳಲ್ಲಿ ನಾವು ದುಡ್ಡು ಕಳೆದುಕೊಂಡಿದ್ದೇವೆ. ಈ ಸಿನಿಮಾ ಯಶಸ್ವಿಯಾಗಿ ಹಣ ಗಳಿಸಿಕೊಡುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ’ ಎಂದರು.

ಕರ್ನಾಟಕ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕೃತ ಮಂಡಳಿ ಈ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಿದೆ. ಬೋಲ್ಡ್‌ ಮತ್ತು ಗ್ಲಾಮರಸ್ಸಾಗಿ ಕಾಣಿಸಿಕೊಂಡಿರುವ ಮುಂಬೈ ನಟಿ ಆಕರ್ಷಿಕಾಗೆ ನಾಯಕಿಯಾಗಿ ಕನ್ನಡದಲ್ಲಿ ಇದು ಚೊಚ್ಚಲ ಚಿತ್ರ. ‘ನನ್ನ ಹೃದಯಕ್ಕೆ ಹತ್ತಿರವಾದ ಸಿನಿಮಾ ಇದು. ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ನನ್ನ ಪಾತ್ರವೂ ಚೆನ್ನಾಗಿದೆ’ ಎಂದರು. ಇವರಲ್ಲದೆ ಮತ್ತೊಬ್ಬ ನಟಿ ನಸ್ರಿನಾ, ನೇಪಾಳದ ಆಯುಶ್ರೀ, ಇರಾನಿನ ಅನಾ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಲ್ವಿನ್ ಜೋಶ್ವಾ ಸಂಗೀತ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.