ADVERTISEMENT

ಮತ್ತೊಮ್ಮೆ ಖಾಕಿ ತೊಡಲಿದ್ದಾರೆ ನಾಗಾರ್ಜುನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 19:30 IST
Last Updated 29 ಡಿಸೆಂಬರ್ 2019, 19:30 IST
ಅಕ್ಕಿನೇನಿ ನಾಗರ್ಜುನ್‌, ನಟ
ಅಕ್ಕಿನೇನಿ ನಾಗರ್ಜುನ್‌, ನಟ   

‘ಮನ್ಮಥಡು’ ಚಿತ್ರದ ಹಿಟ್‌ ಬಳಿಕ ಅಕ್ಕಿನೇನಿ ನಾಗಾರ್ಜುನ ಮತ್ತೊಮ್ಮೆ ತೆರೆಮೇಲೆ ಪೊಲೀಸ್‌ ಅಧಿಕಾರಿಯಾಗಿ ಅಬ್ಬರಿಸಲು ಸಿದ್ಧರಾಗಿದ್ದಾರೆ!

ಇನ್ನು ಹೆಸರಿಡದ ಈ ಚಿತ್ರವನ್ನು ನಿರ್ದೇಶಕ ಸಾಲೋಮನ್‌ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ಇದು ಚೊಚ್ಚಲ ಚಿತ್ರ. ನಾಗಾರ್ಜುನರ ಈ ಹೊಸ ಸಿನಿಮಾದಲ್ಲಿರುವತಾರಾಗಣದ ಬಗ್ಗೆ ಇನ್ನೂ ಅಧಿಕೃತ ಮಾಹಿತಿ
ಲಭ್ಯವಾಗಿಲ್ಲ. ಶೀಘ್ರದಲ್ಲಿ ಈ ಬಗ್ಗೆ ಚಿತ್ರತಂಡ ಬಹಿರಂಗ ಪಡಿಸಲಿದೆಯಂತೆ.ಸಿನಿಮಾದ ಚಿತ್ರೀಕರಣ ಮಾತ್ರ ಭರದಿಂದ ಸಾಗುತ್ತಿದೆ. ಇದಕ್ಕೆ ಮ್ಯಾಟಿನಿ ಎಂಟರ್‌ಟೇನ್‌ಮೆಂಟ್‌ ಬಂಡವಾಳ ಹೂಡಿದೆ.

ಈ ಸಿನಿಮಾದ ಆ್ಯಕ್ಷನ್‌ ಸೀನ್‌ಗಳನ್ನು ವಿಭಿನ್ನವಾಗಿ ಚಿತ್ರೀಕರಿಸಲಾಗುತ್ತಿದ್ದು, ಹಾಲಿವುಡ್‌ನ ಆ್ಯಕ್ಷನ್‌ ಕೊರಿಯೋಗ್ರಾಫರ್‌ ಬಳಿ ಚಿತ್ರತಂಡ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ADVERTISEMENT

ರಾಮ್‌ ಗೋಪಾಲ್‌ ವರ್ಮಾ ನಿರ್ದೇಶನದ ‘ಆಫೀಸರ್ಸ್‌’ ಚಿತ್ರದಲ್ಲಿ ನಾಗಾರ್ಜುನ ಅವರು ಐಪಿಎಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದರು. ಅವರ ಅಭಿನಯಕ್ಕೆ ಬಹಳ ಪ್ರಶಂಸೆಯೂ ಸಿಕ್ಕಿತ್ತು.

ಸದ್ಯಕರಣ್‌ ಜೋಹರ್‌ ನಿರ್ದೇಶನದ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ನಾಗಾರ್ಜುನ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಅಮಿತಾಭ್‌ ಬಚ್ಚನ್‌, ಆಲಿಯಾ ಭಟ್‌ ಮತ್ತು ರಣ್‌ಬೀರ್‌ ಕಪೂರ್‌ ಪ್ರಮುಖ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.