ಅಅಭಿಮಾನಿಗಳು ಹಂಚಿಕೊಂಡಿರುವ ಪೋಸ್ಟರ್
ಬೆಂಗಳೂರು: ತೆಲುಗು ಚಿತ್ರರಂಗದ ‘ಗಾಡ್ ಆಫ್ ಮಾಸ್’ ಖ್ಯಾತಿಯ ನಂದಮೂರಿ ಬಾಲಕೃಷ್ಣ ಅವರ 65ನೇ ಜನ್ಮದಿನವಿಂದು (ಜೂನ್ 10). ಈ ಪ್ರಯುಕ್ತ ಅವರ ಮುಂಬರುವ ಚಿತ್ರ ‘ಅಖಂಡ–2 ತಾಂಡವಂ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು ಭಾರಿ ಸದ್ದು ಮಾಡಿದೆ.
ತೆಲುಗಿನ ಮಾಸ್ ನಿರ್ದೇಶಕ ಬೋಯಾಪಾಟಿ ಶ್ರೀನು ನಿರ್ದೇಶಿಸುತ್ತಿರುವ ‘ಅಖಂಡ–2 ತಾಂಡವಂ’ ಇದೇ ವರ್ಷ ದಸರಾ ವೇಳೆಗೆ ಸೆಪ್ಟೆಂಬರ್ 25ರಂದು ಬಿಡುಗಡೆಯಾಗಲು ಅಣಿಯಾಗಿದೆ.
ಎಂದಿನಂತೆ ಈ ಚಿತ್ರದಲ್ಲೂ ಎನ್‌ಬಿಕೆ ಮಾಸ್ ದೃಶ್ಯಗಳಿಂದ ಅಬ್ಬರಿಸಿದ್ದು ಎದ್ದು ಕಾಣುತ್ತಿದೆ. ಅದರಲ್ಲೂ ತ್ರಿಶೂಲದಲ್ಲಿ ಎದುರಾಳಿಗಳನ್ನು ಚಚ್ಚಿ ಗಿರಗಿರನೇ ಬಿಸಾಕುತ್ತಿರುವ ದೃಶ್ಯವಂತೂ ಎನ್‌ಬಿಕೆ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
2021ರಲ್ಲಿ ಬಿಡುಗಡೆಯಾಗಿದ್ದ ಅಖಂಡ ಚಿತ್ರದ ಸಿಕ್ವೇಲ್ ಆಗಿದೆ ಅಖಂಡ–2. 14 ರೀಲ್ಸ್ ಪ್ಲಸ್ ಬ್ಯಾನರ್ ಅಡಿ ಈ ಚಿತ್ರವನ್ನು ರಾಮ್ ಅಚಂಟಾ ಹಾಗೂ ಗೋಪಿ ಅಚಂಟಾ ನಿರ್ಮಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಎನ್‌ಬಿಕೆ ಜೊತೆಯಾಗಿ ಮಲಯಾಳಂನ ಸಂಯುಕ್ತಾ ಮೆನನ್ ನಟಿಸುತ್ತಿದ್ದಾರೆ. ಉಳಿದ ಪ್ರಮುಖ ತಾರಾಗಣದ ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಎಸ್. ತಮನ್ ಅವರ ಸಂಗೀತ ಹಾಗೂ ಸಿ. ರಾಮಪ್ರಸಾದ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.