ADVERTISEMENT

ಚೆನ್ನೈನಲ್ಲಿ ಮನೆ ಖರೀದಿಸಿದ ನಟಿ ನಯನತಾರ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 11:04 IST
Last Updated 27 ನವೆಂಬರ್ 2021, 11:04 IST
ನಯನತಾರ
ನಯನತಾರ   

ಚೆನ್ನೈ: ದಕ್ಷಿಣ ಭಾರತದ ಬೆಡಗಿ ನಯನತಾರ ಇಲ್ಲಿನ ಪೋಯಸ್‌ಗಾರ್ಡನ್‌ನಲ್ಲಿ ಹೊಸ ಮನೆ ಖರೀದಿಸಿದ್ದಾರೆ.

ಸೂಪರ್‌ಸ್ಟಾರ್ ರಜನಿಕಾಂತ್‌, ನಟ ಧನುಷ್‌ ಹಾಗೂ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಮನೆಯ ಸಮೀಪದಲ್ಲೇ ಈ ಮನೆ ಇದೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

ಪೋಯೆಸ್ ಗಾರ್ಡನ್ ಅತ್ಯಂತ ದುಬಾರಿ ಏರಿಯಾವಾಗಿದೆ. ಇಲ್ಲಿ ಉದ್ಯಮಿಗಳು, ರಾಜಕೀಯ ನಾಯಕರು ಹಾಗೂ ಸಿನಿಮಾ ನಟ, ನಟಿಯರ ಮನೆಗಳು ಕೂಡ ಇಲ್ಲಿವೆ. ಸದ್ಯ ನಯನತಾರ 4 ಬೆಡ್‌ರೂಂ ಇರುವ ಫ್ಲ್ಯಾಟ್‌ ಅನ್ನು ಖರೀದಿ ಮಾಡಿದ್ದಾರೆ.

ADVERTISEMENT

ಮುಂದಿನ ದಿನಗಳಲ್ಲಿ ತಮಿಳು ನಿರ್ದೇಶಕ ವಿಘ್ನೇಶ್‌ ಶಿವನ್‌ ಅವರನ್ನು ಮದುವೆಯಾಗಲಿದ್ದು ಇಲ್ಲಿಯೇ ನೆಲೆಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಇತ್ತೀಚೆಗೆ ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಹಿಟ್‌ ಆಗಿರುವ 'ಅಣ್ಣಾತ್ತೆ' ಚಿತ್ರದಲ್ಲೂ ರಜನಿಕಾಂತ್‌ಗೆ ನಾಯಕಿಯಾಗಿ ನಯನತಾರ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.