ADVERTISEMENT

ಪ್ರೀತಿಯ ಜಂಜಾಟದ ‘ನೀನೊಂದು ಶಾಯರಿ’

​ಪ್ರಜಾವಾಣಿ ವಾರ್ತೆ
Published 14 ಜನವರಿ 2024, 4:45 IST
Last Updated 14 ಜನವರಿ 2024, 4:45 IST
ಭರತ 
ಭರತ    

‘ಭೀಮಸೇನ ನಳಮಹಾರಾಜ’, ‘ಬ್ಲಿಂಕ್’, ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಸೇರಿದಂತೆ ಹಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ, ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಭರತ ಕೆ.ತುಮಕೂರು ಕಿರುಚಿತ್ರವೊಂದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. 

ಕಿರುಚಿತ್ರಗಳು ಹಾಗೂ ‘ಮಗಳು ಜಾನಕಿ’ ಧಾರವಾಹಿ ಖ್ಯಾತಿಯ ರಾಕೇಶ್ ಮಯ್ಯ ಹಾಗೂ ‘ಕಂಬ್ಳಿಹುಳ’ ಸಿನಿಮಾ ಖ್ಯಾತಿಯ ಅಶ್ವಿತಾ ಹೆಗ್ಡೆ ನಟಿಸಿರುವ, ಭರತ ನಿರ್ದೇಶನದ ‘ನೀನೊಂದು ಶಾಯರಿ’ ಜ.15ರಂದು ಪಿಆರ್‌ಕೆ ಆಡಿಯೊ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ. ‘21 ನಿಮಿಷಗಳ ಈ ಕಿರುಚಿತ್ರವು ಸರಳ ಪ್ರೇಮ ಕಥೆಯಾಗಿದ್ದು, ನಮ್ಮೆಲ್ಲರ ಜೀವನದಲ್ಲಿ ನಡೆದಿರಬಹುದಾದ ಒಂದು ಘಟನೆಯನ್ನು ಆಧರಿಸಿ ಮಾಡಲಾಗಿದೆ’ ಎಂದಿದ್ದಾರೆ ಭರತ. ‘ಭಾವನಾತ್ಮಕವಾಗಿ ಪ್ರೀತಿಯ ಜಂಜಾಟದಲ್ಲಿ ಸಿಲುಕಿದ ಹುಡುಗ ಅದರಿಂದ ಆಚೆ ಬರುವ ಪ್ರಕ್ರಿಯೆ ಈ ಚಿತ್ರವಾಗಿದೆ’ ಎನ್ನುತ್ತಾರೆ ಅವರು. 

ಕಿರುಚಿತ್ರಕ್ಕೆ ಪ್ರಸನ್ನ ಕುಮಾರ್ ಎಂ. ಎಸ್ ಸಂಗೀತ, ಸಂಜೀವ್ ಜಾಗೀರ್‌ದಾರ್ ಸಂಕಲನ ಹಾಗೂ ಅವಿನಾಶ ಶಾಸ್ತ್ರಿ ಅವರ ಛಾಯಾಚಿತ್ರಗ್ರಹಣವಿದೆ. 

ADVERTISEMENT
ರಾಕೇಶ್‌ ಮಯ್ಯ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.