ADVERTISEMENT

ಹೊಸಬರ ಸಾರೋಟು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 19:30 IST
Last Updated 3 ಮಾರ್ಚ್ 2020, 19:30 IST
ಶ್ರೀಕಿರಣ್
ಶ್ರೀಕಿರಣ್   

‘ಚಂದನವನ’ದಲ್ಲಿ ಒಂದಿಷ್ಟು ಜನ ಹೊಸಬರು ಸೇರಿಕೊಂಡು, ಸಾರೋಟು ಏರಿ ಪ್ರಯಾಣ ಆರಂಭಿಸಿದ್ದಾರೆ. ಅಂದರೆ, ‘ಸಾರೋಟ್’ ಎಂಬ ಸಿನಿಮಾ ಮಾಡಿದ್ದಾರೆ.

‘ನಮ್ಮದು ಬಹಳ ಭಿನ್ನವಾಗಿರುವ ಸಿನಿಮಾ’ ಎಂದು ಇವರು ಹೇಳಿಕೊಳ್ಳುತ್ತಿಲ್ಲ. ಅದರ ಬದಲು, ‘ನಾವು ನೀಟ್‌ ಆಗಿ ಒಂದು ಸಿನಿಮಾ ಮಾಡಿದ್ದೇವೆ. ವೀಕ್ಷಿಸಿ’ ಎಂದು ಇವರು ಸಿನಿಪ್ರೇಮಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಚಿತ್ರವು ಈಗ ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿ ಇದೆಯಂತೆ.

ಚಿತ್ರಕ್ಕೆ ಆ್ಯಕ್ಷನ್–ಕಟ್ ಹೇಳಿರುವವರು ಗೌತಮ್. ಆದರೆ, ಈ ಚಿತ್ರದ ಕಥೆಯ ಒಂದು ಎಳೆಯನ್ನೂ ಅವರು ಬಿಟ್ಟುಕೊಟ್ಟಿಲ್ಲ. ಚಿತ್ರದಲ್ಲಿ ನಗುವಿಗೆ ಬರವಿಲ್ಲ, ಹೊಸ ಲೊಕೇಷನ್‌ಗಳನ್ನು ನೋಡಬಹುದು, ಒಳ್ಳೆಯ ಆ್ಯಕ್ಷನ್ ಮತ್ತು ಹಾಡುಗಳು ಇವೆ ಎಂದು ಅವರು ಹೇಳಿದ್ದಾರೆ.

ADVERTISEMENT

ಚಿತ್ರದ ಟೀಸರ್‌ ಅನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂಬ ಉದ್ದೇಶ ಸಿನಿತಂಡದ್ದು. ಶ್ರೀಕಿರಣ್ ಅವರು ಈ ಚಿತ್ರದ ನಾಯಕ. ಮರ್ಲಿನ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.