ADVERTISEMENT

ಇನ್‌ಸ್ಟಾಗ್ರಾಮಲ್ಲಿ ಬಿಸಿ ಏರಿಸಿದ ನಿಧಿ ಸುಬ್ಬಯ್ಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 8:13 IST
Last Updated 18 ಜನವರಿ 2021, 8:13 IST
ನಿಧಿ ಸುಬ್ಬಯ್ಯ: ಇನ್‌ಸ್ಟಾಗ್ರಾಮ್ ಚಿತ್ರಗಳು
ನಿಧಿ ಸುಬ್ಬಯ್ಯ: ಇನ್‌ಸ್ಟಾಗ್ರಾಮ್ ಚಿತ್ರಗಳು   

ಬೆಂಗಳೂರು: ಕೆಲದಿನಗಳಿಂದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದ ನಟಿ ನಿಧಿ ಸುಬ್ಬಯ್ಯ ಏಕಾಏಕಿ ಇನ್‌ಸ್ಟಾಗ್ರಾಮ್‌ನಲ್ಲಿ ಬಿಸಿ ಏರಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಿಧಿ, ಈ ಬಾರಿ ಮಿರರ್ ಸೆಲ್ಫಿ ಚಿತ್ರ ಹಾಕಿ ಸುದ್ದಿಯಾಗಿದ್ದಾರೆ. ‘ಬಿ ಯುವರ್ ಓನ್ ಕೈಂಡ್ ಆಫ್ ಬ್ಯೂಟಿಫುಲ್’ಎಂದು ಬರೆದುಕೊಂಡಿರುವ ನಟಿ ಚಿತ್ರಕ್ಕೆ ಬಹಳಷ್ಟು ಕಾಮೆಂಟ್‌ಗಳು ಬಂದಿವೆ.

ಸ್ವಲ್ಪ ಉದ್ದದ ಒಳ ಉಡುಪು ಧರಿಸಬಹುದಿತ್ತು ಎಂದು ಕೆಲವರು ಕಾಮೆಂಟ್ ಮಾಡಿದರೆ, ಮತ್ತೆ ಕೆಲವರು ಲಕ್ಷ ಲಕ್ಷ ಸಂಪಾದನೆ ಮಾಡಿದರೂ ಉಡಲು ಬಟ್ಟೆ ಇಲ್ಲವೆ ಎಂದು ಆಕ್ಷೇಪ ಎತ್ತಿದ್ದಾರೆ.

ಚಮ್ಕಾಯ್ಸಿ ಚಿಂದಿ ಉಡಾಯ್ಸಿ, ಕೃಷ್ಣಾ ನೀ ಲೇಟ್ ಆಗಿ ಬಾರೋ, ಪಂಚರಂಗಿ, ವೀರಬಾಹು, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಅಣ್ಣಾ ಬಾಂಡ್, ಓಹ್ ಮೈ ಗಾಡ್, ಅಜಬ್ ಗಜಬ್ ಲವ್ ಸೇರಿದಂತೆ ಕನ್ನಡ, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ನಿಧಿ ಸುಬ್ಬಯ್ಯ, ಸದ್ಯ ಯಾವುದೇ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಎಲ್ಲಿದ್ದೀರಿ? ಏನ್ ಮಾಡ್ತಿದ್ದೀರಿ ಎಂದು ಇನ್‌ಸ್ಟಾಗ್ರಾಮಲ್ಲಿ ಕೇಳಿದ ಪ್ರಶ್ನೆಗೂ ಉತ್ತರ ಬಂದಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.