ADVERTISEMENT

PHOTOS| ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 7:50 IST
Last Updated 10 ಫೆಬ್ರುವರಿ 2020, 7:50 IST
   
""
""

ಬೆಂಗಳೂರು:ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಪುತ್ರ, ನಟ ನಿಖಿಲ್‍ ಕುಮಾರಸ್ವಾಮಿ ಅವರ ವಿವಾಹದ ನಿಶ್ಚಿತಾರ್ಥ ಸೋಮವಾರ ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನೆರವೇರಿತು.

ಶಾಸಕ ಎಂ.ಕೃಷ್ಣಪ್ಪ ಅವರ ಸಹೋದರನ ಮೊಮ್ಮಗಳಾದ ರೇವತಿ ಅವರೊಂದಿಗೆ ನಿಖಿಲ್‍ ಕುಮಾರಸ್ವಾಮಿ ವಿವಾಹದ ನಿಶ್ಚಿತಾರ್ಥವು ಎರಡೂ ಕುಟುಂಬಗಳ ಬಂಧು-ಬಳಗ ಹಾಗೂ ಹಿರಿಯರ ಸಮ್ಮುಖದಲ್ಲಿ ನೆರವೇರಿತು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಶಾಸಕ ಎಚ್.ಡಿ.ರೇವಣ್ಣ ಸೇರಿದಂತೆ ಕುಟುಂಬದ ಸದಸ್ಯರು ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದರು.

ವಿವಿಧ ಪಕ್ಷಗಳ ರಾಜಕೀಯ ನಾಯಕರು, ಮುಖಂಡರು, ಚಲನಚಿತ್ರರಂಗದ ಗಣ್ಯರು, ಉಭಯ ಕುಟುಂಬಗಳ ಬಂಧುಗಳು, ಹಿತೈಷಿಗಳು ನಿಶ್ಚಿತಾರ್ಥಕ್ಕೆ ಆಗಮಿಸಿ ನಿಖಿಲ್ ಹಾಗೂ ರೇವತಿ ಅವರಿಗೆ ಶುಭ ಹಾರೈಸಿದರು.

ADVERTISEMENT
ಹಣೆಗೆ ಕುಂಕುಮ
ಸಂಭ್ರಮದ ಗಳಿಗೆ
ಮೊಮ್ಮಗನ ​​​​ನಿಶ್ಚಿತಾರ್ಥದಲ್ಲಿ ಮಾಜಿ ಪ್ರಧಾನಿ ದೇವೇಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.