ADVERTISEMENT

ಮನಾಲಿಗೆ ಮನಸೋತ ‘ಮ್ಯಾಟ್ನಿ’

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 22:30 IST
Last Updated 21 ಫೆಬ್ರುವರಿ 2023, 22:30 IST
ಅದಿತಿ ಹಾಗೂ ಸತೀಶ್‌
ಅದಿತಿ ಹಾಗೂ ಸತೀಶ್‌   

ನೀನಾಸಂ ಸತೀಶ್‌ ನಟನೆಯ ಹೊಸ ಚಿತ್ರ ‘ಮ್ಯಾಟ್ನಿ’ ಚಿತ್ರೀಕರಣ ಅಂತಿಮ ಹಂತ ತಲುಪಿದೆ. ಇತ್ತೀಚೆಗೆ ಚಿತ್ರತಂಡ ಕುಲು–ಮನಾಲಿಯಲ್ಲಿ ಹಾಡೊಂದನ್ನು ಚಿತ್ರೀಕರಿಸಿದೆ. ಹೊಸ ಸುದ್ದಿ ಏನೆಂದರೆ ಚಿತ್ರದಲ್ಲಿ ಇಬ್ಬರು ನಾಯಕಿಯರಿರಲಿದ್ದು,
ರಚಿತಾ ರಾಮ್‌ ಜೊತೆಗೆ ಅದಿತಿ ಪ್ರಭುದೇವ ಅವರೂ ಸತೀಶ್‌ಗೆ ಜೋಡಿಯಾಗಿದ್ದಾರೆ.

ಚಿತ್ರದ ಮೂರನೇ ಹಾಡನ್ನು ಕುಲುಮನಾಲಿಯಲ್ಲಿ ಚಿತ್ರೀಕರಿಸಲಾಗಿದೆ. ಇಲ್ಲಿ ಸತೀಶ್‌ ಹಾಗೂ ಅದಿತಿ ಜೋಡಿ ಹಾಡಿಗೆ ಹೆಜ್ಜೆ ಹಾಕಿದೆ. ಮನೋಹರ್‌ ಕಾಂಪಲ್ಲಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರವನ್ನು ಪಾರ್ವತಿ ಎಸ್‌.ಗೌಡ ನಿರ್ಮಾಣ ಮಾಡಿದ್ದಾರೆ. ನಟರಾದ ನಾಗಭೂಷಣ್‌, ಪೂರ್ಣ, ಶಿವರಾಜ್‌ ಕೆ.ಆರ್‌.ಪೇಟೆ ಮತ್ತಿತರರು ಚಿತ್ರದ ತಾರಾಗಣದಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಚಿತ್ರಕ್ಕಿದೆ.

ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿರುವ ಸತೀಶ್‌, ‘ಚಿತ್ರದ ಶೇ 98ರಷ್ಟು ಚಿತ್ರೀಕರಣ ಮುಗಿದಿದೆ. ಒಂದು ಹಾಡಷ್ಟೇ ಬಾಕಿ ಉಳಿದಿದೆ. ರಚಿತಾ ರಾಮ್‌ ಜೊತೆಗಿನ ಹಾಡೊಂದನ್ನು ಅದ್ಧೂರಿಯಾಗಿ ಚಿತ್ರೀಕರಣ ನಡೆಸಲಾಗಿದೆ. ಕೊರೆಯುವ ಚಳಿ, ಹಿಮಪಾತದ ನಡುವೆ ಹಾಡಿನ ಚಿತ್ರೀಕರಣ ಸವಾಲಿನಿಂದ ಕೂಡಿತ್ತು. ವಿಂಟೇಜ್‌ ಶೈಲಿಯಲ್ಲಿ ಈ ಹಾಡು ತೆರೆ ಮೇಲೆ ಕಾಣಿಸಲಿದೆ. ಮನಾಲಿ ಮುಂದೆ ಯಾವ ಸ್ವಿಟ್ಜರ್‌ಲೆಂಡ್‌ ಕೂಡಾ ಇಲ್ಲ’ ಎನ್ನುತ್ತಾ ಅಲ್ಲಿನ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.