ADVERTISEMENT

‘ನೋಡಿದ್ದು ಸುಳ್ಳಾಗಬಹುದು’ ಎಂದ ಹೊಸಬರು: ವಿಜಯ್ ಚಲಪತಿ ನಿರ್ದೇಶನದ ಚಿತ್ರ

ಪ್ರಜಾವಾಣಿ ವಿಶೇಷ
Published 14 ಆಗಸ್ಟ್ 2025, 2:41 IST
Last Updated 14 ಆಗಸ್ಟ್ 2025, 2:41 IST
<div class="paragraphs"><p>ಪಲ್ಲವಿ</p></div>

ಪಲ್ಲವಿ

   

ಬಹುತೇಕ ಹೊಸಬರಿಂದಲೇ ಕೂಡಿರುವ ‘ನೋಡಿದ್ದು ಸುಳ್ಳಾಗಬಹುದು’ ಚಿತ್ರದ ‘ಕನಸುಗಳ ಮೆರವಣಿಗೆ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ವಿಜಯ್ ಚಲಪತಿ ನಿರ್ದೇಶನದ ಚಿತ್ರವಿದು.

ಅನಿರುದ್ಧ್ ಶಾಸ್ತ್ರಿ ಬರೆದು, ಗುಮ್ಮಿನೆನಿ ವಿಜಯ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಅನಿರುದ್ಧ್ ಶಾಸ್ತ್ರಿ ಮತ್ತು ಪೃಥ್ವಿ ಭಟ್ ಧ್ವನಿಯಾಗಿದ್ದಾರೆ. ‘ನನಗೆ ಹತ್ತು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟಿದೆ. ‘ಪೊಗರು’ ಸೇರಿದಂತೆ ಹಲವು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಸ್ವತಂತ್ರ ನಿರ್ದೇಶಕನಾಗಿ ಇದು ಮೊದಲ ಚಿತ್ರ. ಚಿತ್ರಕ್ಕೆ ಇದೇ ಶೀರ್ಷಿಕೆ ಏಕೆ? ಎಂಬುದು ಚಿತ್ರ ನೋಡಿದಾಗ ತಿಳಿಯುತ್ತದೆ. ಇದೊಂದು ನೈಜ ಘಟನೆ ಆಧಾರಿತ ಚಿತ್ರ. ಈಗಾಗಲೇ ಚಿತ್ರೀಕರಣ ಪೂರ್ಣವಾಗಿ,‌ ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಚಿತ್ರ ಮೂಡಿಬಂದಿದೆ’ ಎಂದರು ನಿರ್ದೇಶಕರು.

ADVERTISEMENT

ಅನಿಲ್ ಕುಮಾರ್ ಕೆ.ಆರ್ ನಿರ್ಮಾಣ ಮಾಡುವುದರೊಂದಿಗೆ ನಾಯಕನಾಗಿಯೂ ನಟಿಸಿದ್ದಾರೆ. ಪಲ್ಲವಿ ನಾಯಕಿ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಗುಮ್ಮಿನೆನಿ ವಿಜಯ್ ಎರಡು ಹಾಡುಗಳಿಗೆ ಹಾಗೂ ಮಿಹಿರಾಮ್ಸ್ ಎರಡು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆ.ವಿ.ಕಿರಣ್ ಛಾಯಾಚಿತ್ರಗ್ರಹಣ, ಶ್ರೀನಿವಾಸ್ ಕಲಾಲ್ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.