ADVERTISEMENT

ರೂ ಅಫ್ಜಾ ಅಲ್ಲ, ರೂಹಿ ಅಫ್ಜಾ

ಚಿತ್ರದ ಹೆಸರು ಬದಲಾವಣೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 19:45 IST
Last Updated 19 ಜೂನ್ 2019, 19:45 IST
In this photo taken on June 4, 2019, Indian Bollywood actress Janhvi Kapoor attends the premiere of Hindi film 'Bharat' in Mumbai. (Photo by Sujit Jaiswal / AFP)
In this photo taken on June 4, 2019, Indian Bollywood actress Janhvi Kapoor attends the premiere of Hindi film 'Bharat' in Mumbai. (Photo by Sujit Jaiswal / AFP)   

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ನಟಿಸುತ್ತಿರುವ ‘ರೂ ಅಫ್ಜಾ’ ಸಿನಿಮಾದ ಹೆಸರಿಗೆ ತಕರಾರು ಬಂದಿದೆ. ‘ರೂ ಅಫ್ಜಾ’ ಗುಲಾಬಿ ದಳಗಳ ಪಾನೀಯದ ಬ್ರ್ಯಾಂಡ್ ಆಗಿದ್ದು, ಅದಕ್ಕೆ 112 ವರ್ಷಗಳ ಇತಿಹಾಸವಿದೆ. ಇಂಥ ಬ್ರ್ಯಾಂಡ್ ಪಾನೀಯದ ಹೆಸರನ್ನು ಹಾಸ್ಯಭರಿತ ಸಿನಿಮಾಕ್ಕೆ ಹೆಸರಿಟ್ಟಿದ್ದು ಸರಿಯಲ್ಲ ಎಂದು ‘ರೂ ಅಫ್ಜಾ’ ಕಂಪನಿ ತಕರಾರು ತೆಗೆದಿದೆ.

ಹಾಗಾಗಿ, ‘ರೂ ಅಫ್ಜಾ’ ಈಗ ‘ರೂಹಿ ಅಫ್ಜಾ’ ಆಗಿ ತೆರೆಗೆ ಬರಲಿದೆ. ಸಿನಿಮಾಗಳ ಶೀರ್ಷಿಕೆಗೆ ತಕರಾರು ತೆಗೆಯುವುದು ಹೊಸ ವಿಷಯವಿಲ್ಲ. ಈ ಹಿಂದೆ ಸಲ್ಮಾನ್ ಖಾನ್ ಅಭಿನಯದ ‘ದಬಾಂಗ್’ ಸಿನಿಮಾದ ಹಾಡೊಂದರಲ್ಲಿ ‘ಜಂಡು ಬಾಮ್’ ಹೆಸರು ಬಳಸಿದ್ದಕ್ಕೆ ಆ ಕಂಪನಿ ತಕರಾರು ತೆಗೆದಿತ್ತು.

‘ರೂ ಅಫ್ಜಾ’ ಪಾಕಿಸ್ತಾನ ಮತ್ತು ಭಾರತದಲ್ಲಿ ತಯಾರಾಗುತ್ತಿರುವ ಪುರಾತನ ಪಾನೀಯ. ಹಕೀಂ ಅಬ್ದುಲ್ ಮಜಿದ್ ‘ರೂ ಅಫ್ಜಾ’ದ ಸ್ಥಾಪಕರಾಗಿದ್ದು, ಭಾರತ–ಪಾಕಿಸ್ತಾನ ಇಬ್ಭಾಗವಾದಾಗ ಮಜಿದ್ ಅವರ ಮಗ ಇದೇ ಹೆಸರಿನಲ್ಲಿ ತಮ್ಮದೇ ಬ್ರ್ಯಾಂಡ್ ರೂಪಿಸಿದ್ದಾರೆ. ಸಿನಿಮಾಕ್ಕೆ ಇದೇ ಹೆಸರಿಡು ವುದರಿಂದ ಬ್ರ್ಯಾಂಡ್‌ಗೆ ಧಕ್ಕೆಯಾಗಬಹುದು ಎನ್ನುವುದು ಅವರ ವಾದ.

ADVERTISEMENT

‘ರೂಹಿ ಅಫ್ಜಾ‘ ಸಿನಿಮಾವನ್ನು ಹಾರ್ದಿಕ್ ಮೆಹ್ತಾ ನಿರ್ದೇಶಿಸುತ್ತಿದ್ದು, ನಾಯಕಿ ಜಾಹ್ನವಿ ಕಪೂರ್‌ಗೆ ರಾಜ್‌ಕುಮಾರ್ ರಾವ್ ನಾಯಕನಾಗಿ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.