ADVERTISEMENT

ಜೂನಿಯರ್‌ ಎನ್‌ಟಿಆರ್‌ಗೆ ಕೋವಿಡ್‌ ಸೋಂಕು

​ಪ್ರಜಾವಾಣಿ ವಾರ್ತೆ
Published 10 ಮೇ 2021, 12:15 IST
Last Updated 10 ಮೇ 2021, 12:15 IST
ಜೂನಿಯರ್‌ ಎನ್‌ಟಿಆರ್‌
ಜೂನಿಯರ್‌ ಎನ್‌ಟಿಆರ್‌   

ತೆಲುಗು ನಟ ಜೂನಿಯರ್‌ ಎನ್‌ಟಿಆರ್‌ ಅವರು ಕೋವಿಡ್‌ ಸೋಂಕಿಗೆ ತುತ್ತಾಗಿದ್ದಾರೆ.

ತಮಗೆ ಸೋಂಕು ತಗುಲಿರುವ ಬಗ್ಗೆ ಟ್ವೀಟ್‌ ಮೂಲಕ ಹೇಳಿರುವ ನಟ, ನನ್ನ ಕೋವಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದೆ. ಆದರೆ ಯಾರೂ ಆತಂಕಪಡುವುದು ಬೇಡ. ನಾನು ಆರೋಗ್ಯವಾಗಿದ್ದೇನೆ. ನಾನು ಮತ್ತು ನನ್ನ ಕುಟುಂಬದವರು ಮನೆಯೊಳಗೆ ಕ್ವಾರಂಟೈನ್‌ ಆಗಿದ್ದೇವೆ. ಚಿಕಿತ್ಸೆ ಪಡೆಯುತ್ತಿದ್ದೇವೆ. ಇತ್ತೀಚೆಗೆ ನಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ಎಚ್ಚರ ವಹಿಸಿ ಎಂದು ಮನವಿ ಮಾಡಿದ್ದಾರೆ.

ಇತ್ತೀಚೆಗೆ ನೀಡಿದ ಕನ್ನಡದಲ್ಲಿ ನೀಡಿದ ವಿಡಿಯೋ ಸಂದೇಶದಲ್ಲಿ, ‘ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ದೊಡ್ಡ ಅಸ್ತ್ರ. ಸದಾ ಮಾಸ್ಕ್‌ ಧರಿಸಿ, ಕೈ ಸ್ವಚ್ಛವಾಗಿಟ್ಟುಕೊಳ್ಳಿ, ಓಡಾಡುವಾಗ ಅಂತರ ಕಾಯ್ದುಕೊಳ್ಳಿ, ವ್ಯಾಕ್ಸೀನ್‌ ಹಾಕಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿ’ ಎಂದು ಹೇಳಿದ್ದರು.

ADVERTISEMENT

ಅಂದಹಾಗೆ ಅವರು ಪ್ರಧಾನ ಭೂಮಿಕೆಯಲ್ಲಿರುವ ಚಿತ್ರ ಆರ್‌ಆರ್‌ಆರ್‌ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ (2022) ಮುಂದೂಡಲಾಗಿದೆಯಂತೆ.

ಟ್ವೀಟ್‌ ಓದಲು ಲಿಂಕ್‌: https://twitter.com/tarak9999/status/1391686192760987651

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.