ADVERTISEMENT

‘ಓ ರೋಮಿಯೊ’.. ಶಾಹೀದ್ ಕಪೂರ್– ತೃಪ್ತಿ ಧಿಮ್ರಿ ಹೊಸ ಸಿನಿಮಾ ಟೈಟಲ್ ಅನಾವರಣ

ಪಿಟಿಐ
Published 14 ಸೆಪ್ಟೆಂಬರ್ 2025, 13:40 IST
Last Updated 14 ಸೆಪ್ಟೆಂಬರ್ 2025, 13:40 IST
<div class="paragraphs"><p>ಶಾಹೀದ್ ಕಪೂರ್– ತೃಪ್ತಿ ಧಿಮ್ರಿ</p></div>

ಶಾಹೀದ್ ಕಪೂರ್– ತೃಪ್ತಿ ಧಿಮ್ರಿ

   

ಮುಂಬೈ: ಬಾಲಿವುಡ್‌ನ ಶಾಹೀದ್ ಕಪೂರ್– ತೃಪ್ತಿ ಧಿಮ್ರಿ ಅವರು ಮುಖ್ಯಭೂಮಿಕೆಯಲ್ಲಿರುವ ವಿಶಾಲ್ ಭಾರಧ್ವಾಜ್ ಅವರ ಹೊಸ ಚಿತ್ರದ ಟೈಟಲ್ ಅನಾವರಣವಾಗಿದೆ.

ಈ ಚಿತ್ರಕ್ಕೆ ‘ಓ ರೋಮಿಯೊ’ ಎಂದು ಹೆಸರಿಡಲಾಗಿದೆ. ಇದೊಂದು ಪ್ರೇಮಿಗಳ ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಕಥಾ ಹಂದರವನ್ನು ಒಳಗೊಂಡಿದೆ.

ADVERTISEMENT

Nadiadwala Grandson Entertainment ಅಡಿ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಓ ರೋಮಿಯೊ ಚಿತ್ರ ಮುಂದಿನ ವರ್ಷ ಫೆಬ್ರುವರಿ 14 ರಂದು ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ನಾನಾ ಪಾಟೇಕರ್, ದಿಶಾ ಪಟಾಣಿ ಸೇರಿದಂತೆ ಇನ್ನೂ ಮುಂತಾದವರು ದೊಡ್ಡ ತಾರಾಗಣ ಚಿತ್ರದಲ್ಲಿದೆ ಎಂದು ಶಾಹಿದ್ ಕಪೂರ್ ತಿಳಿಸಿದ್ದಾರೆ.

ಪೂಜಾ ಹೆಗ್ಡೆ ಜೊತೆ ಶಾಹಿದ್ ಕಪೂರ್ ಇತ್ತೀಚೆಗೆ ನಟಿಸಿದ್ದ ದೇವ ಸಿನಿಮಾ ಅಷ್ಟೊಂದು ಯಶಸ್ವಿಯಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.