ADVERTISEMENT

ಕ್ರಿಸ್‌ಮಸ್‌ಗೆ ಒಟಿಟಿಯಲ್ಲಿ 'ಭೂಮಿಕ' ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 10:28 IST
Last Updated 22 ಡಿಸೆಂಬರ್ 2020, 10:28 IST
ಪಿ.ಕೆ.ಎಚ್‌. ದಾಸ್‌
ಪಿ.ಕೆ.ಎಚ್‌. ದಾಸ್‌   

ಕನ್ನಡ ಮತ್ತು ತುಳು ಭಾಷೆಗಳಲ್ಲಿ ನಿರ್ಮಿಸಿರುವ ‘ಭೂಮಿಕ’ ಚಿತ್ರ ಡಿಸೆಂಬರ್‌ 25ರಂದು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ‘ನಮ್ಮ ಫ್ಲೀಕ್ಸ್’ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಮೂಲತಃ ಛಾಯಾಗ್ರಾಹಕರಾಗಿರುವ ಪಿ.ಕೆ.ಎಚ್. ದಾಸ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅಲ್ಲದೇ ಛಾಯಾಗ್ರಹಣ ಕೂಡ ನಿಭಾಯಿಸಿದ್ದಾರೆ. ‘ಬೆಸ್ತರ ಹುಡುಗಿಯ ಕಥೆಯೇ ಚಿತ್ರದ ಜೀವಾಳ. ಇದು ನನ್ನ ನಿರ್ದೇಶನದಮೊದಲ ಸಿನಿಮಾ. ಮಂಗಳೂರು ಸುತ್ತ 28 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ. ಬೆಸ್ತರ ಹುಡುಗಿಯ ಜೀವನದಲ್ಲಿ ನಡೆಯುವ ಏರಿಳಿತದ ಕಥೆ ಇದರಲ್ಲಿದೆ’ ಎನ್ನುತ್ತಾರೆ.

‘ನಾನು ಈ ಹಿಂದೆ ಹಲವು ಸಿನಿಮಾ ಮಾಡಿದ್ದೆ. ‘ವಜ್ರಮುಖಿ’ ಚಿತ್ರ ಮಾಡುವಾಗ ದಾಸ್ ಅವರ ಪರಿಚಯವಾಗಿತ್ತು. ಈ ಚಿತ್ರದ ಕಥೆ ಹೇಳಿದಾಗ ತುಂಬಾ ಇಷ್ಟವಾಗಿತ್ತು’ ಎನ್ನುವ ಮಾತು ಸೇರಿಸಿದರು ಈ ಚಿತ್ರಕ್ಕೆ ಬಂಡವಾಳ ಹೂಡಿರುವ ವೃತ್ತಿಯಲ್ಲಿ ವೈದ್ಯರಾದ ಸಾಗರದ ನರೇಂದ್ರ ನಾಯ್ಕ್.

ADVERTISEMENT

‘ಚಿತ್ರದ ಕಂಟೆಂಟ್ ನೋಡಿಯೇ ತುಂಬ ಸೆಳೆಯಿತು. ವಿಭಿನ್ನ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಮೊದಲ ಸಲ ನಮ್ಮ ಒಟಿಟಿಯಲ್ಲಿ ತುಳು ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಹಿಂದೆ ‘ಭ್ರಮೆ’ ಚಿತ್ರದ 10 ಸಾವಿರ ಟಿಕೆಟ್ ಮಾರಾಟವಾಗಿದ್ದವು. ‘ತನಿಖೆ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತು. ಇದೀಗ ‘ಭೂಮಿಕ’ ಸರದಿ ಎನ್ನುವ ಮಾತು ಸೇರಿಸಿದರು ‘ನಮ್ಮ ಫ್ಲಿಕ್ಸ್’ ಒಟಿಟಿಯ ವಿಜಯ್ ಕುಮಾರ್.

ಚಿತ್ರಕ್ಕೆ ಸಂಭಾಷಣೆ ಬರೆದಿರುವ ಭವಾನಿ ಶಂಕರ್, ‘ಸಮಾಜ ಮತ್ತು ಬೆಸ್ತರ ಹೆಣ್ಣುಮಕ್ಕಳ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ ಮಂಗಳೂರಿನ ಪ್ರಾದೇಶಿಕತೆಯ ಸೊಗಡು ಈ ಚಿತ್ರದಲ್ಲಿ ಕಾಣಸಿಗಲಿದೆ’ ಎನ್ನುತ್ತಾರೆ.

ನವೀನ್ ಡಿ. ಪಡೀಲ್, ಆಲಿಷಾ ಅಂಡ್ರದೆ, ರವಿ ಕಿರಣ್ ತಾರಾಬಳಗದಲ್ಲಿದ್ದಾರೆ. ರಾಜ್ ಭಾಸ್ಕರ್ ಸಂಗೀತ, ಕೆ.ಎಂ ಇಂದ್ರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಹೀರಾ ಕ್ರಿಯೆಷನ್ಸ್ ಬ್ಯಾನರ್‌ನಡಿ ಗೀತಾ ನರೇಂದ್ರ ನಾಯ್ಕ್ ಮತ್ತು ನರೇಂದ್ರ ನಾಯ್ಕ್‌ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.