ADVERTISEMENT

ಮೆಲ್ಬರ್ನ್‌ ಚಿತ್ರೋತ್ಸವದಲ್ಲಿ ಕನ್ನಡದ ‘ಒಂದಲ್ಲಾ ಎರಡಲ್ಲಾ’

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 19:30 IST
Last Updated 18 ಜುಲೈ 2019, 19:30 IST
ಒಂದಲ್ಲಾ, ಎರಡಲ್ಲಾ
ಒಂದಲ್ಲಾ, ಎರಡಲ್ಲಾ   

ಕನ್ನಡದ ಚಿತ್ರವೊಂದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನದ ಭಾಗ್ಯ ಪಡೆದಿದೆ.ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ನಡೆಯಲಿರುವ ಭಾರತೀಯ ಚಿತ್ರೋತ್ಸವದಲ್ಲಿ ಕನ್ನಡದ ‘ಒಂದಲ್ಲಾ ಎರಡಲ್ಲಾ’ ಚಿತ್ರ ಪ್ರದರ್ಶನಗೊಳ್ಳಲಿದೆ.

‘ರಾಮಾ ರಾಮಾ ರೇ’ ಮತ್ತು ‘ಹೆಬ್ಬುಲಿ’ಯಂತಹ ಪಕ್ಕಾ ಕಮರ್ಷಿಯಲ್‌ ಮತ್ತು ವಿಭಿನ್ನ ಚಿತ್ರಗಳನ್ನು ನಿರ್ಮಿಸಿದ ತಂಡ ‘ಒಂದಲ್ಲಾ ಎರಡಲ್ಲಾ’ ಚಿತ್ರವನ್ನು ನಿರ್ಮಿಸಿದೆ. ‘ರಾಮಾ ರಾಮಾ ರೇ’ ಚಿತ್ರದ ನಿರ್ದೇಶಕ ಡಿ. ಸತ್ಯಪ್ರಕಾಶ್‌ ಈ ಚಿತ್ರ ನಿರ್ದೇಶಿಸಿದ್ದು, ಉಮಾಪತಿ ಶ್ರೀನಿವಾಸ್ ನಿರ್ಮಿಸಿದ್ದಾರೆ. ಈ ಹಿಂದೆ ಸುದೀಪ್‌ ನಟನೆಯ ಹೆಬ್ಬುಲಿ ಚಿತ್ರವನ್ನು ಅವರು ನಿರ್ಮಿಸಿದ್ದರು.

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮೆಚ್ಚಿನ ಹಸು ಮತ್ತು ಸಮೀರ್‌ ಎಂಬ ಏಳು ವರ್ಷದ ಬಾಲಕನ ನಡುವಿನ ಸಂಬಂಧಗಳನ್ನು ಭಾವನಾತ್ಮಕವಾಗಿ ಕಟ್ಟಿಕೊಡಲಾಗಿದೆ.

ADVERTISEMENT

ಕಳೆದ ಹಸುವನ್ನು ಹುಡುಕಲು ಹೊರಡುವ ಮುಗ್ಧ ಬಾಲಕನಿಗೆ ಸಮಾಜ ಮತ್ತು ಜೀವನದ ವಿವಿಧ ಮುಖಗಳ ಪರಿಚಯವಾಗುತ್ತದೆ. ಹಸು ಮತ್ತು ಬಾಲಕನ ಸುತ್ತ ಈ ಚಿತ್ರಕಥೆ ಗಿರಕಿ ಹೊಡೆಯುತ್ತದೆ. ಹಸು ಕಳೆದುಕೊಂಡು ಪರಿತಪಿಸುವ ಮುಗ್ಧ ಬಾಲಕನ ಪಾತ್ರವನ್ನು ರೋಹಿತ್‌ ಪಾಂಡವಪುರ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾನೆ.

ಚಿತ್ರದಲ್ಲಿ ನಟಿಸಿರುವ ರಂಗಭೂಮಿ ಹಿನ್ನೆಲೆಯ ಕಲಾವಿದರ ಮನೋಜ್ಞ ಅಭಿನಯ ಈ ಚಿತ್ರಕ್ಕೆ ನೈಜತೆ ತಂದುಕೊಟ್ಟಿದೆ. ಮೆಲ್ಬರ್ನ್‌ನಲ್ಲಿ ಆಗಸ್ಟ್‌ 8ರಿಂದ 17ರವರೆಗೆ ನಡೆಯಲಿರುವ ಭಾರತೀಯ ಚಿತ್ರೋತ್ಸವದಲ್ಲಿ ‘ಒಂದಲ್ಲಾ ಎರಡಲ್ಲಾ’ ಜತೆಗೆ ಇತರ ಭಾರತೀಯ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.