ADVERTISEMENT

ಆಸ್ಕರ್‌ ರೇಸ್‌ನಿಂದ ಹೊರಬಿದ್ದ ತಮಿಳು ಚಿತ್ರ 'ಕೂಳಾಂಗಲ್'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2021, 7:26 IST
Last Updated 22 ಡಿಸೆಂಬರ್ 2021, 7:26 IST
'ಕೂಳಾಂಗಲ್' ಚಿತ್ರದ ದೃಶ್ಯ
'ಕೂಳಾಂಗಲ್' ಚಿತ್ರದ ದೃಶ್ಯ   

2022ರಅಕಾಡೆಮಿ ಅವಾರ್ಡ್ಸ್‌ಗೆ ಭಾರತದಿಂದ ಪ್ರವೇಶ ಪಡೆದಿದ್ದ ತಮಿಳಿನ 'ಕೂಳಾಂಗಲ್' ಚಿತ್ರವು ಆಸ್ಕರ್‌ ಸ್ಪರ್ಧೆಯಿಂದ ಹೊರಬಿದ್ದಿದೆ.

ಕೂಳಾಂಗಲ್ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಚೆಲ್ಲಪಾಂಡಿ ಮತ್ತು ಕರುಥಾಡೈಯಾನ್‌ ಅಭಿನಯಿಸಿದ್ದಾರೆ. ನಯನತಾರಾ ಮತ್ತು ವಿಗ್ನೇಶ್‌ ಶಿವನ್‌ಈ ಚಿತ್ರದ ನಿರ್ಮಾಣ ಮಾಡಿದ್ದಾರೆ.

ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಭಾರತದಿಂದ ಪ್ರವೇಶ ಪಡೆದಿದ್ದ ‘ರೈಟಿಂಗ್ ವಿತ್ ಫೈರ್‘ ಚಿತ್ರವು ಆಸ್ಕರ್‌ ಸ್ಪರ್ಧೆಯ ಮುಂದಿನ ಸುತ್ತನ್ನು ಪ್ರವೇಶಿಸಿದೆ ಎಂದುಅಕಾಡೆಮಿ ಆಫ್‌ ಮೋಷನ್‌ ಪಿಕ್ಚರ್ ಆರ್ಟ್‌ ಮತ್ತು ಸೈನ್ಸ್‌ (ಎಎಂಪಿಎಎಸ್‌) ಮಂಗಳವಾರ ಪ್ರಕಟಿಸಿದೆ.

ADVERTISEMENT

ಮೀರಾ ದೇವಿ ಹಾಗೂ ಸುನೀತಾ ಪ್ರಜಾಪತಿ ಅವರು‘ರೈಟಿಂಗ್ ವಿತ್ ಫೈರ್‘ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.