ADVERTISEMENT

ಹೊರಬಿತ್ತು ಪ.ರಂಜಿತ್‌ 'ತಂಗಲಾನ್' ಫಸ್ಟ್‌ ಲುಕ್‌, ಕೋಲಾರದ ಕಥೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2022, 13:21 IST
Last Updated 24 ಅಕ್ಟೋಬರ್ 2022, 13:21 IST
   

ಪ.ರಂಜಿತ್‌ ಸಿನಿಮಾಗಳೆಂದರೆ ಭಿನ್ನ ಕಥೆಗಳನ್ನು ಹೊಂದಿರುತ್ತದೆ. ಸರ್ಪಟ್ಟ ಪರಂಬರೈ ನಂತರ ರಂಜಿತ್‌ ‘ಥಂಗಳಾನ್‌’ನೊಂದಿಗೆ ಬರಲು ಸಿದ್ಧರಾಗಿದ್ದಾರೆ. ಚಿಯಾನ್‌ ವಿಕ್ರಂ–ಪ.ರಂಜಿತ್‌ ಜೋಡಿಯ ಬಹುನಿರೀಕ್ಷಿತ ಚಿತ್ರ ತಂಗಲಾನ್‌ನ ಫಸ್ಟ್‌ ಲುಕ್‌ ಸೋಮವಾರ ಬಿಡುಗಡೆಗೊಂಡಿದೆ.

ಪಾರ್ವತಿ, ಮಾಳವಿಕಾ ಮೋಹನ್‌ ಮತ್ತು ಪಶುಪತಿ ಅವರಿರುವ ಟೀಸರ್‌ ಕೂಡ ಹೊರಬಂದಿದೆ. ಸಾಂಪ್ರದಾಯಿಕ ಹಳ್ಳಿಯ ಯಾವುದೋ ಸಮುದಾಯದ ನಾಯಕನಂತೆ ವಿಕ್ರಂ ಕಾಣುತ್ತಿದ್ದಾರೆ. ಅವರು ಬ್ರಿಟಿಷರೊಂದಿಗೆ ಹೋರಾಡುವ ಕಥೆಯಂತೆ ಕಾಣುತ್ತಿದೆ.

19ನೇ ಶತಮಾನ ಬ್ರಿಟಿಷ್‌ ಆಳ್ವಿಕೆ ಕಾಲದ ಕಥೆಯಾಗಿದ್ದು, ಕರ್ನಾಟಕದ ಕೋಲಾರದಲ್ಲಿನ ಪೂರ್ವಕುಡಿ ಸಮುದಾಯ ಬಗೆಗಿನ ಚಿತ್ರವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ತಮಿಳಿನ ಹಿಂದುಳಿದ ಸಮುದಾಯವಿದು. ಅದರ ನಾಯಕನಾಗಿ ಚಿಯಾನ್‌ ವಿಕ್ರಂ ಬುಡಕಟ್ಟು ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT

ಜಿವಿ ಪ್ರಕಾಶ್‌ ಸಂಗೀತ ಚಿತ್ರಕ್ಕಿದೆ. ಸ್ಟುಡಿಯೋ ಗ್ರೀನ್ ಮತ್ತು ನೀಲಂ ನಿರ್ಮಾಣ ಸಂಸ್ಥೆ ಚಿತ್ರವನ್ನು ನಿರ್ಮಿಸುತ್ತಿದೆ. ಚಿಯಾನ್‌ ವಿಕ್ರಂ, ಮಣಿರತ್ನಂ ಅವರ ಪೊನ್ನಿಯಿನ್‌ ಸೆಲ್ವನ್‌ ಭರ್ಜರಿ ಹಿಟ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.