
ಪ್ರಜಾವಾಣಿ ವಾರ್ತೆ
ಮಲಯಾಳ ನಟ ಟೊವಿನೋ ಥಾಮಸ್ ನಟನೆಯ ಹೊಸ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿತ್ರವು ಏ.9ರಂದು ತೆರೆಗೆ ಬರಲಿದೆ.
ಡಿಜೋ ಜೋಸ್ ಆಂಟೋನಿ ಸಾರಥ್ಯದ ‘ಪಳ್ಳಿಚಟ್ಟಂಬಿ’ ಸಿನಿಮಾದ ಮೋಷನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದೆ. ವರ್ಲ್ಡ್ ವೈಡ್ ಫಿಲ್ಮ್ಸ್ ಮತ್ತು ಸಿ ಕ್ಯೂಬ್ ಬ್ರದರ್ಸ್ ಎಂಟರ್‌ಟೇನ್ಮೆಂಟ್ ಬ್ಯಾನರ್‌ನಡಿ ಈ ಸಿನಿಮಾವನ್ನು ನೌಫಲ್ ಮತ್ತು ಬ್ರಿಜೇಶ್ ನಿರ್ಮಿಸಿದ್ದಾರೆ. ಕನ್ನಡ, ಮಲಯಾಳ ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಕಯಾದು ಲೋಹರ್ ನಾಯಕಿಯಾಗಿ ನಟಿಸಿದ್ದಾರೆ. ವಿಜಯ ರಾಘವನ್, ಸುಧೀರ್ ಕರಮನ, ಬಾಬುರಾಜ್, ವಿನೋದ್ ಕೆದಮಂಗಲಂ, ಪ್ರಶಾಂತ್ ಅಲೆಕ್ಸಾಂಡರ್ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. 50-60ರ ದಶಕದ ಸುತ್ತ ಕಥೆಯನ್ನು ಹೆಣೆಯಲಾಗಿದೆ.
ಚಿತ್ರಕ್ಕೆ ಟಿಜೊ ಟಾಮಿ ಛಾಯಾಚಿತ್ರಗ್ರಹಣ, ಜೇಕ್ಸ್ ಬಿಜಾಯ್ ಸಂಗೀತ ಸಂಯೋಜಿಸಿದ್ದಾರೆ. ಶ್ರೀಜಿತ್ ಸಾರಂಗ್ ಸಂಕಲನ ಚಿತ್ರಕ್ಕಿದ್ದು, ಎಸ್. ಸುರೇಶ್ ಬಾಬು ಚಿತ್ರಕಥೆ ಬರೆದಿದ್ದಾರೆ.