ADVERTISEMENT

ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2025, 12:41 IST
Last Updated 19 ಅಕ್ಟೋಬರ್ 2025, 12:41 IST
   

ನವದೆಹಲಿ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಬಗ್ಗೆ ಅವರ ಪತಿ, ಸಂಸದ ರಾಘವ್ ಛಡ್ಡಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

‘ಕೊನೆಗೂ ಅವನು ಬಂದಿದ್ದಾನೆ. ನಮಗೆ ಗಂಡು ಮಗು ಹುಟ್ಟಿದೆ. ನಮ್ಮ ಕೈ ತುಂಬಿದೆ, ಹೃದಯವೂ ತುಂಬಿದೆ. ಈಗ ನಾವು ಎಲ್ಲವನ್ನು ಪಡೆದಿದ್ದೇವೆ’ ಎಂದು ಛಡ್ಡಾ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

2023ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಪರಿಣಿತಿ–ಛಡ್ಡಾ, 2025ರ ಆಗಸ್ಟ್‌ನಲ್ಲಿ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದರು.

ಎಎಪಿ ಪಕ್ಷದ ಸಂಸದರಾಗಿರುವ ಛಡ್ಡಾ ಅವರನ್ನು ಮೊದಲಿಗೆ ಲಂಡನ್‌ನಲ್ಲಿ ಭೇಟಿಯಾಗಿರುವುದಾಗಿ ಪರಿಣಿತಿ ತಿಳಿಸಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಇಬ್ಬರು ವಿವಾಹವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.