ADVERTISEMENT

ಹಾಲಿವುಡ್‌ನ ಗಮನ ಸೆಳೆದ ‘ಭಾರತ್‌’ ಪೋಸ್ಟರ್

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 19:30 IST
Last Updated 18 ಏಪ್ರಿಲ್ 2019, 19:30 IST
‘ಭಾರತ್’ ಹೊಸ ಪೋಸ್ಟರ್‌
‘ಭಾರತ್’ ಹೊಸ ಪೋಸ್ಟರ್‌   

ಬಾಲಿವುಡ್‌ನ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌–ಕತ್ರಿನಾ ಕೈಫ್‌ ನಟಿಸಿರುವ ಚಿತ್ರ ‘ಭಾರತ್‌’ನ ಹೊಸ ಪೋಸ್ಟರ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಇನ್‌ಸ್ಟಾಗ್ರಾಂನಲ್ಲಿ ಎರಡನೇ ಪೋಸ್ಟರ್‌ನ್ನೂ ಸಲ್ಲೂ ಭಾಯ್‌ ಶೇರ್‌ ಮಾಡಿಕೊಂಡಿದ್ದಾರೆ. ಅದು ಮೂಡಿಸಿರುವ ಸಂಚಲನ ಹೇಗಿದೆ ಎಂದರೆ ಹಾಲಿವುಡ್‌ ದಿಗ್ಗಜರೂ ಪ್ರತಿಕ್ರಿಯಿಸಿದ್ದಾರೆ!

ಹಾಲಿವುಡ್‌ ನಟಿ, ರೂಪದರ್ಶಿ, ಗಾಯಕಿ, ಫ್ಯಾಷನ್‌ ವಿನ್ಯಾಸಕಿ ಪ್ಯಾರಿಸ್‌ ಹಿಲ್ಟನ್‌ ‘ಭಾರತ್‌’ ಪೋಸ್ಟರ್‌ನಲ್ಲಿ ಸಲ್ಲೂ ಲುಕ್‌ಗೆ ಫಿದಾ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ‘ಕೂಲ್‌’ ಎಂಬ ಇಮೋಜಿಯನ್ನು ಅವರು ಸಲ್ಲೂಗೆ ಕಳುಹಿಸಿದ್ದಾರೆ.

‘ಭಾರತ್‌’ನಲ್ಲಿ ಸಲ್ಲೂ ಭಾಯ್‌ ಮತ್ತು ಕತ್ರಿನಾ ಕೈಫ್‌ ಅವರು 16ರಿಂದ 70 ವರ್ಷದವರೆಗಿನ ವಿವಿಧ ಹಂತಗಳ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಸಲ್ಲೂ ಭಾಯ್‌ ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟರ್‌ನಲ್ಲಿ ಅವರ 90ರ ದಶಕದ ಚಿತ್ರವಿದೆ. ಪ್ಯಾರಿಸ್‌ ಹಿಲ್ಟನ್‌ ಆ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.