ADVERTISEMENT

ಯೂರೋಪ್‌ನಲ್ಲಿ ಸೈಫೀನಾ ಮಸ್ತಿ

ಪ್ರವಾಸದಲ್ಲಿ ಪಟೌಡಿ ಕುಟುಂಬ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 19:30 IST
Last Updated 5 ಜೂನ್ 2019, 19:30 IST
ಸೈಫೀನಾ
ಸೈಫೀನಾ   

‌ಪಟೌಡಿ ಫ್ಯಾಮಿಲಿ ಮಂದಿ ಇದೀಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ.

ಸೈಫ್ ಅಲಿ ಖಾನ್, ಕರೀನಾ ಕಪೂರ್ ಹಾಗೂ ಇವರಿಬ್ಬರ ಮುದ್ದಿನ ಮುಗ ತೈಮೂರ್ ಅಲಿ ಖಾನ್ ಯೂರೋಪ್ ಪ್ರವಾಸದಲ್ಲಿದ್ದಾರೆ. ಇಟಲಿಯ ಟಸ್ಕನಿಯಲ್ಲಿ ಅವರು ಬೇಸಿಗೆಯನ್ನು ಬಿಂದಾಸ್ ಆಗಿ ಕಳೆಯುತ್ತಿದ್ದಾರೆ.

ಕೆಲಸದಿಂದ ಕೊಂಚ ಬಿಡುವು ಪಡೆದಿರುವ ಸೈಫೀನಾ, ಮಗನ ಜೊತೆ ಮೌಲ್ಯಯುತ ಕ್ಷಣಗಳನ್ನು ಆನಂದಿಸುತ್ತಿದ್ದಾರೆ.

ADVERTISEMENT

ಯೂರೋಪ್‌ನ ಸುಂದರ ಪರಿಸರದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದಾರೆ.ಅಂದಹಾಗೆ ಸೈಫ್ ಆಗಲೀ, ಕರೀನಾ ಆಗಲೀ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿಲ್ಲ. ಕರೀನಾ ಅವರ ಮ್ಯಾನೇಜರ್ ಪೂನಂ ದಮಾನಿಯಾ ಅವರು ಪಟೌಡಿ ಕುಟುಂಬದ ಯುರೋಪ್ ಪ್ರವಾಸದ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.