ADVERTISEMENT

ಶಾರುಖ್‌ ಖಾನ್‌ ನಟನೆಯ ‘ಪಠಾಣ್‌‘ ಚಿತ್ರ ಒಟಿಟಿಯಲ್ಲಿ ₹200 ಕೋಟಿಗೆ ಮಾರಾಟ?

​ಪ್ರಜಾವಾಣಿ ವಾರ್ತೆ
Published 4 ಮೇ 2022, 7:31 IST
Last Updated 4 ಮೇ 2022, 7:31 IST
ಶಾರುಖ್‌ ಖಾನ್‌
ಶಾರುಖ್‌ ಖಾನ್‌   

ಬಾಲಿವುಡ್‌ ನಟ ಶಾರುಖ್‌ ಖಾನ್‌, ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪಠಾಣ್‌ ಬಿಡುಗಡೆಗೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ನಡೆಯುತ್ತಿರುವ ಬೆನ್ನಲೇ ಸಿನಿಮಾದ ಒಟಿಟಿ ಮಾರಾಟವಾಗಿರುವ ಬಗ್ಗೆ ಸುದ್ದಿಗಳು ವರದಿಯಾಗಿವೆ.

ಹಿಂದಿಯ ಸುದ್ದಿ ವಾಹಿನಿಗಳು ವರದಿ ಮಾಡಿರುವಂತೆ ‘ಪಠಾಣ್‌‘ ಸಿನಿಮಾದ ಒಟಿಟಿ ಪ್ರಸಾರದ ಹಕ್ಕುಗಳು ಸುಮಾರು ₹200 ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟವಾಗಿವೆ ಎನ್ನಲಾಗಿದೆ. ಆದಾಗ್ಯೂ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಪ್ರಕಟಿಸಿಲ್ಲ.

ಯಶ್‌ ರಾಜ್‌ ಬ್ಯಾನರ್‌ ಅಡಿ ಈ ಸಿನಿಮಾವನ್ನುನಿರ್ಮಾಣ ಮಾಡಲಾಗಿದೆ. ಈ ಸಂಸ್ಥೆಯವರು ತಮ್ಮ ಬಹುತೇಕ ಸಿನಿಮಾಗಳ ಒಟಿಟಿ ಪ್ರಸಾರ ಹಕ್ಕನ್ನು ‘ಅಮೆಜಾನ್ ಪ್ರೈಮ್‘ಗೆ ಮಾರಾಟ ಮಾಡಿದ್ದಾರೆ. ಪಠಾಣ್‌ ಸಿನಿಮಾದ ಓಟಿಟಿ ಹಕ್ಕುಗಳನ್ನು ಅಮೆಜಾನ್‌ಗೆ ಮಾರಾಟ ಮಾಡಿದ್ದಾರೆ ಎಂದು ಯಶ್‌ ರಾಜ್‌ ಆಪ್ತರು ಖಚಿತಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಸಿದ್ಧಾರ್ಥ್‌ ಆನಂದ್‌ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಶಾರುಖ್‌ ಗೂಢಚಾರನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜಾನ್‌ ಅಬ್ರಹಾಂ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಚಿತ್ರತಂಡ ಹೇಳಿದೆ.

ಆ್ಯಕ್ಷನ್‌–ಥ್ರಿಲ್ಲರ್‌ ಕಥೆ ಒಳಗೊಂಡಿರುವ 'ಪಠಾಣ್‌' ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ 2023ರ ಜನವರಿ 25ರಂದು ತೆರೆಗೆ ಬರಲಿದೆ. 2018ರಲ್ಲಿ ತೆರೆಕಂಡಿದ್ದ 'ಝೀರೊ' ಸಿನಿಮಾದ ನಂತರ ಶಾರುಖ್‌ ಅಭಿನಯಿಸಿರುವ ಸಿನಿಮಾ ಪಠಾಣ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.