ADVERTISEMENT

ಯೂಟ್ಯೂಬ್‌ನಲ್ಲಿ ಪೊಗರು ಡೈಲಾಗ್‌ ಹವಾ: ಎರಡನೇ ದಿನದಲ್ಲಿ 80 ಲಕ್ಷ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2019, 8:30 IST
Last Updated 26 ಅಕ್ಟೋಬರ್ 2019, 8:30 IST
ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾ
ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾ   

ಶುರುವಿನಿಂದಲೂ ಕ್ರೇಜ್‌ ಸೃಷ್ಟಿಸಿರುವ ಪೊಗರು ಸಿನಿಮಾದ ಡೈಲಾಗ್‌ ಟ್ರೈಲರ್‌ ಯೂಟ್ಯೂಬ್ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ.

‘ಅಡ್ರೆಸ್‌ ತಿಳಿದುಕೊಂಡು ಸರ್ವಿಸ್‌ ಮಾಡೊದಕ್ಕೆ ಕೊರಿಯರ್‌ ಹುಡುಗ ಅಂದುಕೊಂಡೆಯಾ... ಪೈಟರ್‌... ಹೊಡೆದ್ರೆ ಯಾವನೂ ಅಡ್ರೆಸ್‌ಗೆ ಇರಲ್ಲ. ಹೋಗಿ ಅವನಿಗೆ ನನ್ನ ಅಡ್ರೆಸ್‌ ಹೇಳು...’ ಎಂಬ ಆ್ಯಕ್ಷನ್‌ ಪ್ರಿನ್ಸ್‌ ಧ್ರವ ಸರ್ಜಾ ಅವರ ಖಡಕ್‌ ಡೈಲಾಕ್ ಮೂಲಕವೇ ಶುರುವಾಗುವ ಈ ಟ್ರೇಲರ್‌ ಬಿಡುಗಡೆಯಾಗಿ ಕೇವಲ 51 ನಿಮಿಷಕ್ಕೆ 1 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಒಂದು ದಿನದಲ್ಲಿಯೇ 5 ಲಕ್ಷ ವೀವ್ಸ್‌ ಪಡೆದಿದ್ದ ಈ ಟ್ರೇಲರ್‌ ಅನ್ನು ಎರಡನೇ ದಿನಕ್ಕೆ 9 ಲಕ್ಷದಷ್ಟು ಜನ ವೀಕ್ಷಿಸಿದ್ದಾರೆ.

ADVERTISEMENT

ನಂದ ಕಿಶೋರ್‌ ಮತ್ತು ಧ್ರುವ ಸರ್ಜಾ ಅವರ ಕಾಂಬಿನೇಷನ್‌ನಡಿ ಮೂಡಿಬರುತ್ತಿರುವ ‘ಪೊಗರು’ ಸಿನಿಮಾದ ಮೇಲೆ ದಿನದಿಂದ ದಿನಕ್ಕೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗುತ್ತಲೇ ಇದೆ.

‘ಮಕ್ಳಾ ಸಿಂಪಲ್ಲಾಗಿ ಮೂರು ಹೊಡೆದಿದ್ದಕ್ಕೆ ಸೀರಿಯಸ್‌ ಆಗಿದ್ದೀರಾ... ಸಿರಿಯಸ್ಸಾಗಿ ಹೊಡೆದ್ರೆ ಸೀದಾ ಸುಡುಗಾಡೇ’ ಎಂದು ಹೂಂಕರಿಸಿದ್ದಾರೆ ಧ್ರವ.

ಈಗಾಗಲೇ, ಈ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ. ಡಿಸೆಂಬರ್‌ 24ರಂದು ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ. ಒಂದು ವೇಳೆ ಈ ದಿನದಂದು ಬಿಡುಗಡೆ ಸಾಧ್ಯವಾಗದಿದ್ದರೆ ಸಂಕ್ರಾಂತಿ ಹಬ್ಬದಂದು ಚಿತ್ರ ತೆರೆ ಕಾಣಲಿದೆ.

ಧ್ರುವ ಸರ್ಜಾ ಅವರಿಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ‘ಡಾಲಿ’ ಖ್ಯಾತಿಯ ಧನಂಜಯ್‌ ಅವರದು ವಿಲನ್‌ ಪಾತ್ರ. ಅಂತರರಾಷ್ಟ್ರೀಯ ಖ್ಯಾತಿಯ ಬಾಡಿಬಿಲ್ಡರ್‌ಗಳ ಜೊತೆಗೆ ಅವರು ಧ್ರುವ ಎದುರು ತೊಡೆತಟ್ಟಿರುವುದು ಈ ಚಿತ್ರದ ವಿಶೇಷ. ಬಿ.ಕೆ. ಗಂಗಾಧರ್ ಆರ್ಥಿಕ ಇಂಧನ ಒದಗಿಸಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.