ADVERTISEMENT

ಒಂಬತ್ತು ವರ್ಷಗಳ ಬಳಿಕ ತಮಿಳು ಚಿತ್ರರಂಗಕ್ಕೆ ಮರಳುತ್ತಿರುವ ಪೂಜಾ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 13:01 IST
Last Updated 25 ಮಾರ್ಚ್ 2021, 13:01 IST
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ   

ನಿರ್ದೇಶಕ ನೆಲ್ಸನ್ ದಿಲೀಪ್‌ ಕುಮಾರ್ ದಳಪತಿ ವಿಜಯ್ ನಾಯಕನಾಗಿ ನಟಿಸುತ್ತಿರುವ ತಮ್ಮ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ ಎಂದು ತಿಳಿಸಿದ್ದಾರೆ. ಈ ಚಿತ್ರಕ್ಕೆ ದಳಪತಿ 65 ಎಂದು ತಾತ್ಕಾಲಿಕವಾಗಿ ಹೆಸರಿಸಲಾಗಿದೆ. ಸನ್‌ ಪಿಕ್ಚರ್ಸ್ ಸಂಸ್ಥೆ ಸಿನಿಮಾಕ್ಕೆ ಹಣ ಹೂಡಿಕೆ ಮಾಡಲಿದೆ.

ಈ ಸಿನಿಮಾದ ಮೂಲಕ ಒಂಬತ್ತು ವರ್ಷಗಳ ಬಳಿಕ ಪೂಜಾ ಹೆಗ್ಡೆ ತಮಿಳು ಸಿನಿರಂಗಕ್ಕೆ ಮರಳುತ್ತಿದ್ದಾರೆ. 2012ರಲ್ಲಿ ಮುಗಮೂಡಿ ಸಿನಿಮಾದಲ್ಲಿ ಆಕೆ ನಟಿಸಿದ್ದರು. ಆ ಬಳಿಕ ಈ ನಟಿ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಅಲ್ಲದೇ ತೆಲುಗಿನಲ್ಲಿ ಟಾಪ್ ನಟಿ ಎನ್ನಿಸಿಕೊಂಡು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.

2019ರಲ್ಲಿ ಅಲ್ಲು ಅರ್ಜುನ್‌ ಜೊತೆ ಅಲಾ ವೈಕುಂಟಪುರಮುಲೊ ಚಿತ್ರದಲ್ಲಿ ನಟಿಸಿದ್ದು ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡಿದಿತ್ತು. ಸದ್ಯ ರಾಧೆ ಶ್ಯಾಮ ಚಿತ್ರದಲ್ಲಿ ಆಕೆ ನಟಿಸುತ್ತಿದ್ದು ಪ್ರಭಾಸ್ ಜೊತೆ ತೆರೆ ಹಂಚಿಕೊಂಡಿದ್ದಾರೆ.

ADVERTISEMENT

ದಳಪತಿ 65 ಆ್ಯಕ್ಷನ್ ಚಿತ್ರವಾಗಿದ್ದು ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ವಿಜಯ್ ನಟನೆಯ 4ನೇ ಚಿತ್ರ ಇದಾಗಿದೆ.

ಶಿವಕಾರ್ತಿಕೇಯನ್ ನಟನೆಯ ಡಾಕ್ಟರ್ ಸಿನಿಮಾವನ್ನುನೆಲ್ಸನ್ ನಿರ್ದೇಶನ ಮಾಡಿದ್ದು, ಇದು ಮಾರ್ಚ್ 26ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ತಮಿಳುನಾಡು ಚುನಾವಣೆಯ ಕಾರಣದಿಂದ ಸಿನಿಮಾ ಬಿಡುಗಡೆಯ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.