ADVERTISEMENT

ತರತಮದ ಬಗ್ಗೆ ಪೂಜಾ ದನಿ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2019, 19:30 IST
Last Updated 28 ಫೆಬ್ರುವರಿ 2019, 19:30 IST
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ   

ಹೀರೊಗಳಿಂದಲೇ ಜನರು ಸಿನಿಮಾ ನೋಡಲು ಬರುತ್ತಾರೆ. ನಿರ್ಮಾಪಕರಿಗೆ ಲಾಭವಾಗುತ್ತದೆ ಎನ್ನುವುದು ಹಳೆಯ ವಾದ. ಇತ್ತೀಚಿನ ದಿನಗಳಲ್ಲಿಯಂತೂ ಮಹಿಳಾ ಚಿತ್ರಗಳೂ ಯಶಸ್ವಿಯಾಗಿವೆ. ಇನ್ನು ಸಂಭಾವನೆ ನೀಡುವಾಗ ಯಾಕೆ ತಾರತಮ್ಯ ಮಾಡಲಾಗುತ್ತದೆ? ಎಂದು ಕನ್ನಡತಿ ಪೂಜಾ ಹೆಗ್ಡೆ ಪ್ರಶ್ನಿಸಿದ್ದಾರೆ.

ಮೊಹೆಂಜೊದಾರೊ, ಹೌಸ್‌ಫುಲ್‌ 4ರ ನಾಯಕಿ ಪೂಜಾ, ಕಳೆದ ವರ್ಷದ ವೀರೆ ದಿ ವೆಡ್ಡಿಂಗ್‌, ರಾಝಿ ಹಾಗೂ ಸ್ತ್ರೀ ಚಿತ್ರಗಳನ್ನು ಉದಾಹರಣೆಯಾಗಿ ನೀಡಿದ್ದಾರೆ.

ಬಾಲಿವುಡ್‌ನಲ್ಲಿ ಇದೀಗ 100 ಕೋಟಿ ಕ್ಲಬ್‌ ಸೇರುವುದು ಸಾಮಾನ್ಯವಾಗಿದೆ. ನಾಯಕರಷ್ಟೇ ನಾಯಕಿಯರೂಶ್ರಮ ಪಡುತ್ತಾರೆ. ಅವರೇನೂ ಕಡಿಮೆ ಪ್ರತಿಭಾವಂತೆಯರಲ್ಲ. ಹೀಗೆ ಬಂದು ಹಾಗೆ ಹೋಗುವ ಪಾತ್ರಗಳೂ ಅಲ್ಲ. ಕೇವಲ ಹಾಡು, ಕುಣಿತಕ್ಕೆ ಮಾತ್ರ ಸೀಮಿತವಾಗಿಲ್ಲ. ಆ್ಯಕ್ಷನ್‌ ಚಿತ್ರಗಳಿರಲಿ, ಅಭಿನಯ ತೀವ್ರತೆಯಿರುವ ಪಾತ್ರಗಳಿರಲಿ, ಹೆಣ್ಣುಮಕ್ಕಳೇ ಕೇಂದ್ರೀಕೃತವಾಗಿರು ಪಾತ್ರಗಳಾದರೂ ನಟಿಯರು ಮಿಂಚುತ್ತಿದ್ದಾರೆ.

ADVERTISEMENT

ನಿರ್ಮಾಪಕರಿಗೆ ಲಾಭ ತಂದು ಕೊಡುವ ಐಟಂ ಸಾಂಗುಗಳಿರಲಿ, ಚಿತ್ರಗಳಿರಲಿ ಎಲ್ಲದರಲ್ಲೂ ಮಹಿಳೆಯರದ್ದೇ ಸಿಂಹಪಾಲು ಶ್ರಮವಿರುತ್ತದೆ. ಹೀಗಿದ್ದಾಗ ಸಿನಿ ಲೋಕದ ಆಲೋಚನಾ ಧಾಟಿ ಬದಲಾಗಬೇಕಿದೆ. ಸಮ ಶ್ರಮ ಸಮವೇತನದ ಜಪ ಇಲ್ಲಿಯೂ ಆರಂಭವಾಗಬೇಕು ಎಂದು ಪೂಜಾ ಹೈದರಾಬಾದ್‌ನಲ್ಲಿ ಹೇಳಿಕೆ ನೀಡಿದ್ದಾರೆ.

ಈ ಹಿಂದೆಯೂ ದೀಪಿಕಾ, ನೇಹಾ ಧುಪಿಯಾ ಮುಂತಾದವರೆಲ್ಲ ಸಮ ವೇತನಕ್ಕಾಗಿ ಧ್ವನಿ ಎತ್ತಿದ್ದರು. ಆ ಸಾಲಿಗೆ ಪೂಜಾ ಸೇರ್ಪಡೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.