ADVERTISEMENT

ತಮಿಳಿನ ಖ್ಯಾತ ಗಾಯಕ ಮಾಣಿಕ್ಯ ವಿನಾಯಗಂ ನಿಧನ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2021, 5:30 IST
Last Updated 27 ಡಿಸೆಂಬರ್ 2021, 5:30 IST
ಮಾಣಿಕ್ಯ ವಿನಾಯಗಂ
ಮಾಣಿಕ್ಯ ವಿನಾಯಗಂ    

ಚೆನ್ನೈ: ತಮಿಳಿನ ಖ್ಯಾತ ಗಾಯಕ ಮಾಣಿಕ್ಕ ವಿನಾಯಗಂ (ಮಾಣಿಕ್ಯ ವಿನಾಯಗಂ) ಅವರು ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.

ವಿನಾಯಗಂ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಭಾನುವಾರ ನಿಧನರಾದರು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ತೆಲುಗು, ಮಲಯಾಳಂ, ಕನ್ನಡ ಸೇರಿದಂತೆ ಹಿಂದಿ ಭಾಷೆಯಲ್ಲಿ ಸುಮಾರು 800ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಅವರು ಸಿನಿಮಾ ಹಾಡುಗಳು ಸೇರಿದಂತೆ, ಭಕ್ತಿಗೀತೆಗಳು ಹಾಗೂ ಜಾನಪದ ಗೀತೆಗಳನ್ನು ಹಾಡಿದ್ದಾರೆ.

ADVERTISEMENT

ವಿನಾಯಗಂ ಅವರು ತಮಿಳಿನಲ್ಲಿ 15 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಹಾಗೇ ತಮಿಳಿನ ಕೆಲವು ಸಿನಿಮಾಗಳಲ್ಲಿ ಕೂಡ ಅವರು ನಟನೆ ಮಾಡಿದ್ದಾರೆ.

ವಿನಾಯಗಂ ನಿಧನಕ್ಕೆ ಗಾಯಕರು, ತಮಿಳುನಾಡಿನ ಸಿನಿಮಾ ಪ್ರಮುಖರು ಹಾಗೂ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.