ADVERTISEMENT

‘ಇಂಟರ್ವಲ್‌’ ಚಿತ್ರದ ಪೋಸ್ಟರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2024, 23:30 IST
Last Updated 15 ಆಗಸ್ಟ್ 2024, 23:30 IST
ಚಿತ್ರದ ಪೋಸ್ಟರ್‌
ಚಿತ್ರದ ಪೋಸ್ಟರ್‌   

ಎಂಜಿನಿಯರಿಂಗ್ ಮುಗಿಸಿದ ಯುವಕರ ಕೆಲಸ ಹುಡುಕಾಟದ ಕಥೆಯನ್ನು ಹೇಳುವ ‘ಇಂಟರ್ವಲ್‌’ ಚಿತ್ರದ ಪೋಸ್ಟರ್‌ ಇತ್ತಿಚೆಗಷ್ಟೇ ಬಿಡುಗಡೆಗೊಂಡಿದೆ. ನಟ ವಿನಯ್‌ ರಾಜ್‌ಕುಮಾರ್‌ ಪೋಸ್ಟರ್‌ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

ಭರತ್ ವರ್ಷ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಕಿರುತೆರೆ ನಟ ಶಶಿರಾಜ್ ಚಿತ್ರದ ನಾಯಕ. ‘ಬೆಂಗಳೂರು ಹಾಗೂ ಶಿವಮೊಗ್ಗದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಶೀಘ್ರದಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕರು.

ಐದು ಹಾಡುಗಳಿಗೆ ವಿಕಾಸ್‌ ವಸಿಷ್ಠ ಸಂಗೀತ ನಿರ್ದೇಶನವಿದ್ದು, ಪ್ರಮೋದ್ ಮರವಂತೆ ಹಾಗೂ ಸುಖಿ ಸಾಹಿತ್ಯ ಬರೆದಿದ್ದಾರೆ. ಚಿತ್ರಕ್ಕೆ ರಾಜ್‌ಕಾಂತ್ ಛಾಯಾಚಿತ್ರಗ್ರಹಣ, ಶಶಿಧರ್ ಸಂಕಲನವಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.