ತೆಲುಗು ಪವರ್‌ಸ್ಟಾರ್ ಪವನ್ ಕಲ್ಯಾಣ್ 3ವರ್ಷಗಳ ನಂತರ ‘ವಕೀಲ್ ಸಾಬ್’ ಚಿತ್ರದ ಮೂಲಕ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ಪವನ್ ಅಭಿಮಾನಿಗಳು ಕೂಡ ಅವರನ್ನು ಮರಳಿ ತೆರೆ ಮೇಲೆ ಕಾಣಲು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರವು ಹಿಂದಿಯ ‘ಪಿಂಕ್’ನ ರಿಮೇಕ್ ಆಗಿದೆ. ಇದರಲ್ಲಿ ಪವನ್ ವಕೀಲನ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಸಿನಿಮಾವೂ ಕಳೆದ ಬೇಸಿಗೆಯಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಲಾಗಿತ್ತು.
ಕಳೆದೆರಡು ವಾರಗಳ ಹಿಂದಿನಿಂದ ಸಿನಿಮಾದ ಶೂಟಿಂಗ್ ಪುನಃ ಆರಂಭವಾಗಿದ್ದು ಸಿನಿಮಾದ ಕೆಲವೊಂದು ಭಾಗದ ಶೂಟಿಂಗ್ ಬಾಕಿ ಉಳಿದಿದೆ. ಸಿನಿಮಾ ಬಿಡುಗಡೆಯ ಕುರಿತು ಈಗಾಗಲೇ ಅನೇಕ ಗಾಳಿಸುದ್ದಿಗಳು ಹರಿದಾಡಿತ್ತು. ಸಂಕ್ರಾಂತಿ ಸಮಯದಲ್ಲಿ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯೂ ಇತ್ತು.
ಆದರೆ ವಕೀಲ್ ಸಾಬ್ ಮುಂದಿನ ಸಂಕ್ರಾಂತಿಗೆ ಬಿಡುಗಡೆಯಾಗುತ್ತಿಲ್ಲ ಎನ್ನುತ್ತಿವೆ ಮೂಲಗಳು. ಬದಲಾಗಿ ಯುಗಾದಿ ಸಮಯಕ್ಕೆ ಥಿಯೇಟರ್ ಕದ ತಟ್ಟಲಿದೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ವೇಣು ಶ್ರೀರಾಮ್ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ತಮನ್ ಸಂಗೀತ ನಿರ್ದೇಶನವಿದೆ. ದಿಲ್‌ರಾಜು ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.