ADVERTISEMENT

‘S/O ಮುತ್ತಣ್ಣ’ನಿಗೆ ಶರಣ್‌, ಹರಿಕೃಷ್ಣ ದನಿ

​ಪ್ರಜಾವಾಣಿ ವಾರ್ತೆ
Published 14 ಮೇ 2025, 21:38 IST
Last Updated 14 ಮೇ 2025, 21:38 IST
ಪ್ರಣಂ, ರಂಗಾಯಣ ರಘು 
ಪ್ರಣಂ, ರಂಗಾಯಣ ರಘು    

ನಟ ದೇವರಾಜ್ ಅವರ ಕಿರಿಯ ಪುತ್ರ ಪ್ರಣಂ ದೇವರಾಜ್ ನಟನೆಯ ‘ಸನ್ ಆಫ್‌ ಮುತ್ತಣ್ಣ’ ಸಿನಿಮಾ ರಿಲೀಸ್‌ಗೆ ಸಜ್ಜಾಗುತ್ತಿದೆ. ಈ ಚಿತ್ರದ ‘ಕಮಂಗಿ ನನ್‌ ಮಗನೇ..’ ಎಂಬ ಹಾಡೊಂದು ಮೇ 17ರಂದು ಬಿಡುಗಡೆಯಾಗಲಿದ್ದು, ನಟ ಶರಣ್‌ ಹಾಗೂ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಇದಕ್ಕೆ ದನಿಯಾಗಿದ್ದಾರೆ. 

ಈ ಹಾಡನ್ನು ನಿರ್ದೇಶಕ ಯೋಗರಾಜ್‌ ಭಟ್‌ ಬರೆದಿದ್ದಾರೆ. ಹಾಡಿಗೆ ಸಚಿನ್ ಬಸ್ರೂರ್ ಸಂಗೀತ ನೀಡಿದ್ದಾರೆ. ರಂಗಾಯಣ ರಘು ಹಾಗೂ ಪ್ರಣಂ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಮತ್ತೊಂದು ಹಾಡಿಗೆ ಹಾಡಿಗೆ ಸಂಚಿತ್, ದೀಪ್ತಿ ಸುರೇಶ್ ದನಿಯಾಗಿದ್ದಾರೆ. ಶ್ರೀಕಾಂತ್‌ ಹುಣಸೂರು ನಿರ್ದೇಶನದ ಈ ಚಿತ್ರದಲ್ಲಿ ತಂದೆ-ಮಗನ ಬಾಂಧವ್ಯದ ಕಥೆಯಿದೆ. ಪ್ರಣಂ ದೇವರಾಜ್‌ ಅವರಿಗೆ ಖುಷಿ ರವಿ ನಾಯಕಿಯಾಗಿ ಜೋಡಿಯಾಗಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಪುರಾತನ ಫಿಲಂಸ್ ಹಾಗೂ ಎಸ್‌ಆರ್‌ಕೆ ಫಿಲಂಸ್‌ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದೆ. 

ಶರಣ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT