ADVERTISEMENT

‘ಪ್ರೇಮಿ’ ಚಿತ್ರೀಕರಣ ಪೂರ್ಣ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 22:57 IST
Last Updated 26 ಸೆಪ್ಟೆಂಬರ್ 2025, 22:57 IST
ಅದ್ವಿಕ್‌, ಸಾತ್ವಿಕ
ಅದ್ವಿಕ್‌, ಸಾತ್ವಿಕ   

ಪ್ರದೀಪ್‌ ವರ್ಮಾ ನಿರ್ದೇಶನದ ‘ಪ್ರೇಮಿ’ ಚಿತ್ರದ ಶೀರ್ಷಿಕೆ ಇತ್ತೀಚೆಗಷ್ಟೇ ಅನಾವರಣಗೊಂಡಿದೆ. ಇದು ವರ್ಮಾ ನಿರ್ದೇಶನದ ಮೂರನೇ ಚಿತ್ರ.

‘ಕನ್ನಡದಲ್ಲಿ ಪ್ರೇಮ ಕಥೆಯುಳ್ಳ ಚಿತ್ರಗಳು ಸಾಕಷ್ಟು ಬಂದಿವೆ. ಆದರೆ, ಜ್ಯೋತಿಷ್ಯದ ಮೂಲಕ ಪ್ರೀತಿಯನ್ನು ಹುಡುಕುವ ವಿಭಿನ್ನ ‌ಪ್ರೇಮ ಕಥಾಹಂದರ ಹೊಂದಿರುವ ಚಿತ್ರವಿದು. ಈಗಾಗಲೇ ಚಿತ್ರೀಕರಣ ಮುಕ್ತಾಯವಾಗಿದ್ದು, ಮಾತಿನ ಜೋಡಣೆ ನಡೆಯುತ್ತಿದೆ. ದಾವಣಗೆರೆ, ದೇವರಬೆಳಕೆರೆ, ಗೋಕರ್ಣ,‌ ಕನಕಪುರ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ’ ಎಂದು ಮಾಹಿತಿ ನೀಡಿದರು ನಿರ್ದೇಶಕ.

ಐದು ಹಾಡುಗಳಿರುವ ಈ ಚಿತ್ರಕ್ಕೆ ಪ್ರದೀಪ್ ವರ್ಮ ಅವರೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ. ಗೌತಮ್ ಮಟ್ಟಿ ಛಾಯಾಚಿತ್ರಗ್ರಹಣ, ಸಂಜೀವ್ ರೆಡ್ಡಿ ಸಂಕಲನವಿದೆ.

ADVERTISEMENT

ನಾಯಕನಾಗಿ ಅದ್ವಿಕ್ ನಟಿಸಿದ್ದಾರೆ. ಸಾತ್ವಿಕ, ಶೋಭಿತ, ಎಸ್ ಪ್ರದೀಪ್ ವರ್ಮ, ಹರೀಶ್ ಉಕ್ಕಡಗಾತ್ರಿ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.