
ಪ್ರಜಾವಾಣಿ ವಾರ್ತೆ
ಎಸ್.ಪ್ರದೀಪ್ ವರ್ಮ ನಿರ್ದೇಶಿಸುತ್ತಿರುವ ‘ಪ್ರೇಮಿ’ ಚಿತ್ರದ ‘ಬಾರೋ ಬಾರೋ ಎಣ್ಣೆ ಹೊಡೆಯೋಣ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಹಾಡು ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
ಈ ಹಾಡನ್ನು ನಿರ್ದೇಶಕರೇ ಬರೆದು, ಸಂಗೀತ ಸಂಯೋಜಿಸಿ, ಹಾಡಿದ್ದಾರೆ. ‘ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ದಾವಣಗೆರೆ, ದೇವರ ಬೆಳಕೆರೆ, ಗೋಕರ್ಣ, ಕನಕಪುರ, ಚಿಕ್ಕಮಗಳೂರು ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಟಿ.ಎಸ್.ಅಕ್ಕಮಹಾದೇವಿ ಕಥೆ ಬರೆದಿದ್ದಾರೆ’ ಎಂದರು ನಿರ್ದೇಶಕ.
ಗೌತಮ್ ಮಟ್ಟಿ ಛಾಯಾಚಿತ್ರಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಈ ಚಿತ್ರಕ್ಕಿದೆ. ಅದ್ವಿಕ್ ಚಿತ್ರದ ನಾಯಕ. ಸಾತ್ವಿಕ, ಶೋಭಿತ, ಹರೀಶ್ ಉಕ್ಕಡಗಾತ್ರಿ, ಶಂಕರ್ ಅಂಬಿ, ಹೆಚ್ ಜಿ ವೀರೇಶ್, ದ್ವಿತ ಕೆ ಗೌಡ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.