ADVERTISEMENT

ವೀರ ಮಹಾದೇವಿ ಚಿತ್ರದಲ್ಲಿ ಸನ್ನಿ ಲಿಯೋನ್: ಶಿವಮೊಗ್ಗದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 11:12 IST
Last Updated 22 ಅಕ್ಟೋಬರ್ 2018, 11:12 IST
ಶಿವಮೊಗ್ಗದಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವೀರ ಮಹಾದೇವಿ ಚಿತ್ರದಿಂದ ಸನ್ನಿಲಿಯೋನ್ ಕೈಬಿಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವೀರ ಮಹಾದೇವಿ ಚಿತ್ರದಿಂದ ಸನ್ನಿಲಿಯೋನ್ ಕೈಬಿಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಚಿತ್ರನಟಿ ಸನ್ನಿಲಿಯೋನ್ ಹಾಗೂ ನಿರ್ಮಾಪಕ ವಾಡಿ ಉದಯನ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಕಾರ್ಯಕರ್ತರು ಸೋಮವಾರ ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸನ್ನಿಲಿಯೋನ್ ವೀರ ಮಹಾದೇವಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ರಾಷ್ಟ್ರಕೂಟ ದೊರೆ ಅಮೋಘ ವರ್ಷ ನೃಪತುಂಗನ ತಂದೆ 3ನೇ ಗೋವಿಂದಹಾಗೂರಾಜೇಂದ್ರ ಚೋಳನ್ ಅವರ ಕುರಿತ ಚಿತ್ರ. ವೀರ ಮಹಾದೇವಿಯಾಗಿ ನಟಿಸುತ್ತಿರುವ ಸನ್ನಿಲಿಯೋನ್ ಅವರನ್ನು ಚಿತ್ರದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಮುಖಂಡರಾದ ಎಚ್.ಎಸ್, ಕಿರಣ್ ಕುಮಾರ್, ಎಸ್.ಬಿ. ಶಿವಕುಮಾರ್, ತಿಮ್ಮರಾಜು, ಕೆ.ಬಿ. ವಿಜಯಲಕ್ಷ್ಮಿ, ಎಸ್.ಎಲ್. ಧನಂಜಯ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.