ADVERTISEMENT

ಹುಚ್ಚನ ಪಾತ್ರದಲ್ಲಿ ಅಭಿನಯಿಸಲು ಪುನೀತ್ ಆಸಕ್ತಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 9:19 IST
Last Updated 13 ಜುಲೈ 2019, 9:19 IST
   

ಬೆಂಗಳೂರು:ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ವಿಭಿನ್ನ ಪಾತ್ರಗಳಲ್ಲಿ ನಟಿಸುವುದೆಂದರೆ ತುಂಬಾಇಷ್ಟ , ಒಬ್ಬ ನಟನಾಗಿ ಭಿನ್ನ ಪಾತ್ರಗಳಲ್ಲಿ ಅಭಿನಯಿಸಲುಆಸಕ್ತಿ ಇರುತ್ತದೆ ಎಂದು ಕನ್ನಡದ ಕೋಟ್ಯಾಧಿಪತಿಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ನೀವು ನಿಮ್ಮ ಬಾಲ್ಯದಿಂದಲೇ ನಾಯಕನಾಗಿ ನಟಿಸುತ್ತಾ ಬಂದಿದ್ದೀರಿನಿಮಗೆ ಒಮ್ಮೆಯಾದರೂ ವಿಭಿನ್ನ ರೀತಿಯ ಸಿನಿಮಾದಲ್ಲಿ ಅಭಿನಯಿಸಬೇಕೆಂದು ಅನ್ನಿಸಲಿಲ್ಲವೇ ಎಂದು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಸ್ಪರ್ಧಿಯೊಬ್ಬರು ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನನಗೆ ಹುಚ್ಚನ ಪಾತ್ರ ,ವಿಲನ್ ಪಾತ್ರ ಮತ್ತು ಎಕ್ಸ್‌ಪೆರಿಮೆಂಟಲ್ ಪಾತ್ರಗಳಲ್ಲಿ ಅಭಿನಯಿಸುವ ಆಸಕ್ತಿ ಇರುವುದಾಗಿತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.